×
Ad

ಫುಟ್ಬಾಲ್: ದಾಖಲೆ ಬರೆದ ರೊನಾಲ್ಡೊ, ಹ್ಯಾರಿ ಕೇನ್

Update: 2023-03-24 08:24 IST

ಯುರೋಪಿಯನ್ ಫುಟ್ಬಾಲ್ ಚಾಂಪಿಯನ್‌ಶಿಪ್-2024ರ ಅರ್ಹತಾ ಸುತ್ತಿನ ಪಂದ್ಯಾವಳಿಯಲ್ಲಿ ಗುರುವಾರ ಖ್ಯಾತ ಫುಟ್ಬಾಲ್ ತಾರೆಗಳಾದ ಕ್ರಿಸ್ಟಿಯಾನೊ ರೊನಾಲ್ಡೊ ಮತ್ತು ಹ್ಯಾರಿ ಕೇನ್ ದಾಖಲೆ ಬರೆದರು.

ಲಿಚೆನ್‌ಸ್ಟೀನ್ ವಿರುದ್ಧ 4-0 ಗೋಲುಗಳ ಅಂತರದಲ್ಲಿ ಪೋರ್ಚ್‌ಗಲ್ ಗೆದ್ದ ಪಂದ್ಯದಲ್ಲಿ ಆಡಿದ 38 ವರ್ಷ ವಯಸ್ಸಿನ ರೊನಾಲ್ಡೊ, ಪುರುಷರ ವಿಭಾಗದಲ್ಲಿ ಗರಿಷ್ಠ ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡಿದ ದಾಖಲೆಗೆ ಪಾತ್ರರಾದರು. ರೊನಾಲ್ಡೊ 197 ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ.

ಈ ಪಂದ್ಯವನ್ನು ಸ್ಮರಣೀಯವಾಗಿಸಿದ ರೊನಾಲ್ಡೊ ಒಂದು ಪೆನಾಲ್ಟಿಯನ್ನು ಗೋಲಾಗಿ ಪರಿವರ್ತಿಸಿದ್ದು ಮಾತ್ರವಲ್ಲದೇ ದ್ವಿತೀಯಾರ್ಧದಲ್ಲಿ ಅಂಚಿನಿಂದ ಶಕ್ತಿಶಾಲಿ ಫ್ರೀಕಿಕ್ ಮೂಲಕ ಗೋಲು ಗಳಿಸಿ ಗಮನ ಸೆಳೆದರು. ಇದರೊಂದಿಗೆ ಅಂತರರಾಷ್ಟ್ರೀಯ ಪಂದ್ಯಗಳಲ್ಲಿ 120ನೇ ಗೋಲು ಸಂಪಾದಿಸಿದರು.

ಇನ್ನೊಂದು ಪಂದ್ಯದಲ್ಲಿ ಇಟೆಲಿ ವಿರುದ್ಧ ಇಂಗ್ಲೆಂಡ್ 2-1 ಗೋಲುಗಳ ಜಯ ಗಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಹ್ಯಾರಿ ಕೇನ್, ದೇಶದ ಪರ ಗರಿಷ್ಠ (54) ಅಂತರರಾಷ್ಟ್ರೀಯ ಗೋಲು ಗಳಿಸಿದ ಹೆಗ್ಗಳಿಕೆಗೆ ಪಾತ್ರರಾದರು. ಇದಕ್ಕೂ ಮುನ್ನ ಈ ದಾಖಲೆ ವೇನ್ ರೂನಿ (53) ಹೆಸರಿನಲ್ಲಿತ್ತು.

ವಿಶ್ವಕಪ್ ಫುಟ್ಬಾಲ್ ಟೂರ್ನಿ ಮುಗಿದ ಮೂರು ತಿಂಗಳ ಬಳಿಕ ಇದೀಗ ಯೂರೊ-2024ರ ಅರ್ಹತಾ ಪಂದ್ಯಗಳು ಆರಂಭವಾಗಿವೆ.

Similar News