×
Ad

ವೃತ್ತಿಜೀವನದ 800ನೇ ಗೋಲು ಗಳಿಸಿದ ಅರ್ಜೆಂಟೀನದ ಸ್ಟಾರ್ ಆಟಗಾರ ಲಿಯೊನೆಲ್ ಮೆಸ್ಸಿ

ಪೋರ್ಚುಗಲ್ ನ ಕ್ರಿಸ್ಟಿಯಾನೊ ರೊನಾಲ್ಡೊ ನಂತರ ಈ ಸಾಧನೆ ಮಾಡಿದ 2ನೇ ಫುಟ್ಬಾಲ್ ಆಟಗಾರ

Update: 2023-03-24 12:27 IST

ಬ್ಯುನಸ್ ಐರಿಸ್: ಅರ್ಜೆಂಟೀನ ತಂಡ ಗುರುವಾರ ನಡೆದ ಅಂತರ್ ರಾಷ್ಟ್ರೀಯ ಸೌಹಾರ್ದ ಪಂದ್ಯದಲ್ಲಿ ಪನಾಮ ತಂಡವನ್ನು 2-0 ಗೋಲುಗಳಿಂದ ಸೋಲಿಸಿದ್ದು, ಕಳೆದ ಡಿಸೆಂಬರ್‌ನಲ್ಲಿ ವಿಶ್ವಕಪ್ ಎತ್ತಿಹಿಡಿದ ನಂತರ ಮೊದಲ ಬಾರಿ ಅರ್ಜೆಂಟೀನ ತಂಡದ ಪರ ಆಡಿದ ಸ್ಟಾರ್ ಆಟಗಾರ   ಲಿಯೊನೆಲ್ ಮೆಸ್ಸಿ(Lionel Messi) ಫ್ರೀ ಕಿಕ್ ಮೂಲಕ ಐತಿಹಾಸಿಕ 800ನೇ ಗೋಲು ಗಳಿಸಿ ಗಮನ ಸೆಳೆದರು.

 ಥಿಯಾಗೊ ಅಲ್ಮಾಡಾ ಹಾಗೂ  ಮೆಸ್ಸಿ ಅವರು ಬ್ಯೂನಸ್ ಐರಿಸ್‌ನ  ಮಾನ್ಯುಮೆಂಟಲ್  ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ತಲಾ ಒಂದು ಗೋಲು ಗಳಿಸಿದರು.  ಮ್ಯಾನೇಜರ್ ಲಿಯೋನೆಲ್ ಸ್ಕಾಲೋನಿ ಫ್ರಾನ್ಸ್ ವಿರುದ್ಧ ವಿಶ್ವಕಪ್ ಫೈನಲ್‌ನಲ್ಲಿ ಆಡಿದ ಆರಂಭಿಕ 11ರ ಬಳಗವನ್ನೇ ಕಣಕ್ಕಿಳಿಸಿದರು.

 ಪಂದ್ಯದ ಪ್ರಥಮಾರ್ಧದಲ್ಲಿ ಅರ್ಜೆಂಟೀನ ತಂಡ  ಪನಾಮ ರಕ್ಷಣಾಕೋಟೆಯನ್ನು  ಭೇದಿಸಲು ವಿಫಲವಾಯಿತು. ಆದರೆ ಅಲ್ಮಾಡಾ ತನ್ನ ಮೊದಲ ಅಂತರರಾಷ್ಟ್ರೀಯ ಗೋಲು ಮೂಲಕ ಡೆಡ್‌ಲಾಕ್ ಅನ್ನು ಮುರಿದರು.

ಅರ್ಜೆಂಟೀನದ ನಾಯಕ ಮೆಸ್ಸಿ  ಅಂತಿಮವಾಗಿ ತನ್ನ ಗಳಿಸಿದರು.  89 ನೇ ನಿಮಿಷದಲ್ಲಿ ಮೆಸ್ಸಿ ಗಳಿಸಿದ  ಗೋಲು ನೆರವಿನಿಂದ  ಅರ್ಜೆಂಟೀನದ ಮುನ್ನಡೆ  ದ್ವಿಗುಣವಾಯಿತು, 80,000  ಪ್ರೇಕ್ಷಕರ ಮುಂದೆ ತಂಡಕ್ಕೆ ಜಯವನ್ನು ಖಚಿತಪಡಿಸಿತು.

 ಮೆಸ್ಸಿ ಅವರು  ಪೋರ್ಚುಗಲ್‌ನ ಕ್ರಿಸ್ಟಿಯಾನೊ ರೊನಾಲ್ಡೊ ನಂತರ 800 ಗೋಲುಗಳನ್ನು ತಲುಪಿದ ಎರಡನೇ ಫುಟ್ಬಾಲ್ ಆಟಗಾರನೆಂಬ ಹಿರಿಮೆ ಪಾತ್ರರಾದರು, ರೊನಾಲ್ಡೊ ಅವರು  ವೃತ್ತಿಜೀವನದಲ್ಲಿ  830 ಗೋಲುಗಳನ್ನು ಗಳಿಸಿದ್ದಾರೆ.

Similar News