ನಿಮ್ಮ ಬೆನ್ನಿಗೆ ಮೂಗುಜ್ಜುತ್ತಿದ್ದೇನೆಂದು ಹೇಳಬಹುದು: ಖರ್ಗೆ ಉದ್ದೇಶಿಸಿ ಹೇಳಿ ಬಿಜೆಪಿಗೆ ತಿರುಗೇಟು ನೀಡಿದ ರಾಹುಲ್‌

Update: 2023-03-24 12:25 GMT

ಹೊಸದಿಲ್ಲಿ: ಮೋದಿ ಉಪನಾಮೆ ಕುರಿತ 2019 ಮಾನನಷ್ಟ ಮೊಕದ್ದಮೆಯಲ್ಲಿ ದೋಷಿ ಎಂದು ಘೋಷಿತರಾಗಿರುವ ಕಾಂಗ್ರೆಸ್‌ ಸಂಸದ ರಾಹುಲ್‌ ಗಾಂಧಿ (Rahul Gandhi) ಅವರು ಲೋಕಸಭಾ ಸದಸ್ಯತ್ವದಿಂದ ಅನರ್ಹರಾಗುವ ಭೇತಿ ಎದುರಿಸುತ್ತಿರುವ ನಡುವೆಯೇ ಇಂದು ಲೋಕಸಭೆಯಲ್ಲಿ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಅವರ ಚೇಂಬರಿನಲ್ಲಿ ಪಕ್ಷದ ಸಭೆಯೊಂದಕ್ಕೆ ಹಾಜರಾಗಲು ಸೋನಿಯಾ ಗಾಂಧಿ ಜೊತೆ ಆಗಮಿಸಿದ್ದರು. ಈ ಸಂದರ್ಭ ಮೆಟ್ಟಿಲುಗಳನ್ನು ಹತ್ತುವಾಗ ರಾಹುಲ್‌ ಗಾಂಧಿ ಅವರು ಖರ್ಗೆ ಅವರಿಗೆ ಸಹಾಯ ಮಾಡುತ್ತಿರುವುದು ಕಂಡುಬಂತು. "ನಾನು ನಿಮ್ಮನ್ನು ಮುಟ್ಟಿದರೂ ಸಹ ನನ್ನ ಮೂಗನ್ನು ನಿಮ್ಮ ಬೆನ್ನಿಗೆ ಉಜ್ಜುತ್ತಿದ್ದೇನೆ ಎಂದು ಅವರು ಹೇಳುತ್ತಾರೆ. ನೋಡಿದಿರಾ? ನಾನು ನಿಮಗೆ ಸಹಾಯ ಮಾಡುತ್ತಿರುವಾಗ ನನ್ನ ಮೂಗನ್ನು ನಿಮ್ಮ ಮೇಲೆ ಉಜ್ಜುತ್ತಿದ್ದೇನೆ ಎಂದು ಹೇಳುತ್ತಿದ್ದಾರೆ," ಎಂದು ರಾಹುಲ್‌ ಹೇಳಿದರು.

ರಾಹುಲ್‌ ಅವರ ಹೇಳಿಕೆ ಇತ್ತೀಚೆಗೆ ಖರ್ಗೆ ಅವರಿಗೆ ತಮ್ಮ ಕಾರಿನಲ್ಲಿ ರಾಹುಲ್‌ ಡ್ರಾಪ್‌ ಮಾಡುವ ವೀಡಿಯೋ ಕುರಿತಂತೆ ಬಿಜೆಪಿ ಮಾಡಿದ ವ್ಯಂಗ್ಯಕ್ಕೆ ತಿರುಗೇಟಾಗಿತ್ತು. ಆ ಸಂದರ್ಭದ ವೀಡಿಯೋದಲ್ಲಿ ರಾಹುಲ್‌ ಅವರು ಖರ್ಗೆ ಅವರ ಬೆನ್ನ ಮೇಲೆ ಕೈ ಹಾಕಿದ್ದರು. ಅದಕ್ಕೆ ಪ್ರತಿಕ್ರಿಯಿಸಿದ್ದ ಬಿಜೆಪಿ, ಖರ್ಗೆ ಅವರನ್ನು ಟಿಶ್ಯೂ ಪೇಪರ್‌ ಆಗಿ ರಾಹುಲ್‌ ಬಳಸುತ್ತಿದ್ದಾರೆ ಎಂದು ಹೇಳಿತ್ತು.

Similar News