ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಹಂತದ ಪಟ್ಟಿ: ಖಾದರ್, ರೈ ಸೇರಿದಂತೆ ದ.ಕ ಜಿಲ್ಲೆಯ 5 ಅಭ್ಯರ್ಥಿಗಳ ಹೆಸರು ಘೋಷಣೆ

Update: 2023-03-25 06:25 GMT

ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಗೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿದ್ದು, ಈ ಹಿನ್ನೆಲೆಯಲ್ಲಿ ಚುನಾವಣೆಗೆ ಸಿದ್ಧತೆ ನಡೆಸಿರುವ ಕಾಂಗ್ರೆಸ್ 124 ಮಂದಿ ಅಭ್ಯರ್ಥಿಗಳ ಮೊದಲ ಹಂತದ ಪಟ್ಟಿಯನ್ನು ಶನಿವಾರ ಪ್ರಕಟಿಸಿದೆ. 

ಮೊದಲ ಹಂತದ ಪಟ್ಟಿಯಲ್ಲಿ  ವಿಧಾನಸಭೆ ವಿಪಕ್ಷ ಉಪ ನಾಯಕ ಯು.ಟಿ ಖಾದರ್ ಸೇರಿ ದ.ಕ ಜಿಲ್ಲೆಯ 5 ಕ್ಷೇತ್ರಗಳ ಅಭ್ಯರ್ಥಿಗಳ ಹೆಸರು ಘೋಷಿಸಿದೆ. ಆದರೆ ಟಿಕೆಟ್ ಆಕಾಂಕ್ಷಿಗಳ ತೀವ್ರ ಹಣಾಹಣಿ ಇರುವ ಮಂಗಳೂರು ಉತ್ತರ , ಮಂಗಳೂರು ದಕ್ಷಿಣ  ಹಾಗು ಪುತ್ತೂರು  ಕ್ಷೇತ್ರಗಳಿಗೆ ಟಿಕೆಟ್ ಘೋಷಣೆಯಾಗಿಲ್ಲ.

ಇದನ್ನೂ ಓದಿ: ವಿಧಾನಸಭಾ ಚುನಾವಣೆ: ಕಾಂಗ್ರೆಸ್‌ ಅಭ್ಯರ್ಥಿಗಳ ಮೊದಲ ಹಂತದ ಪಟ್ಟಿ ಬಿಡುಗಡೆ | ವರುಣಾ ಕ್ಷೇತ್ರದಿಂದ ಸಿದ್ದರಾಮಯ್ಯ ಸ್ಪರ್ಧೆ

► ಅಭ್ಯರ್ಥಿಗಳ ವಿವರ

ಬೆಳ್ತಂಗಡಿ-ರಕ್ಷಿತ್ ಶಿವರಾಮ್

ಮೂಡಬಿದಿರೆ-ಮಿಥುನ್ ಎಮ್. ರೈ.

ಮಂಗಳೂರು- ಯು.ಟಿ. ಅಬ್ದುಲ್ ಖಾದರ್ ಅಲಿ ಫರೀದ್

ಬಂಟ್ವಾಳ-ರಮನಾಥ್ ರೈ .ಬಿ

ಸುಳ್ಯ- ಎಸ್​ಸಿ- ಕೃಷ್ಣಪ್ಪ ಜಿ

Similar News