ಭಟ್ಕಳ: ಕಾರಿನಲ್ಲಿ ಸಾಗಿಸುತ್ತಿದ್ದ ಸುಮಾರು 11 ಕೆಜಿ ಬೆಳ್ಳಿ ವಶ; ಇಬ್ಬರ ಬಂಧನ

Update: 2023-03-27 15:54 GMT

ಭಟ್ಕಳ: ದಾಖಲೆ ಇಲ್ಲದೆ ಬೆಳ್ಳಿ ಸಾಗಿಸುತ್ತಿದ್ದ ಇಬ್ಬರು ವ್ಯಕ್ತಿಗಳನ್ನು ವಾಹನ ಸಮೇತ ಭಟ್ಕಳ ಶಹರಠಾಣೆ ಪೊಲೀಸರು ರವಿವಾರ ವಶಕ್ಕೆ ಪಡೆದಿದ್ದಾರೆ.

ಉಡುಪಿ ತಾಲೂಕಿನ ಇಂದ್ರಳ್ಳಿ ರೈಲ್ವೆ ನಿಲ್ದಾಣದ ಬಳಿಯ ನಿವಾಸಿ ಉಮೇಶ ಜನಾರ್ಧನ ಆಚಾರ್ಯ ಹಾಗೂ ಉಡುಪಿಯ ಅಂಬಾಬಾಗಿಲು ಕುಕ್ಕಂಜೆ ನಿವಾಸಿ ರವಿ ಶೀನಾ ಆಚಾರ್ಯ ಬಂಧಿತರು.

ಇವರು ಉಡುಪಿಯಿಂದ ಹೊನ್ನಾವರದ ಕಡೆಗೆ 7.5 ಲಕ್ಷ ರೂ. ಮೌಲ್ಯದ 10ಕೆಜಿ 820ಗ್ರಾಂ ತೂಕದ ಬೆಳ್ಳಿಯನ್ನು ದಾಖಲೆ ಇಲ್ಲದೆ ಸಾಗಿಸುತ್ತಿದ್ದರು. ಪುರವರ್ಗ ಚೆಕ್‌ಪೋಸ್ಟನಲ್ಲಿ ಪೊಲೀಸರು ತಪಾಸಣೆ ನಡೆಸುವಾಗ ಸಂಶಯಾಸ್ಪ ದವಾಗಿ ಸಿಕ್ಕಿದ್ದರಿಂದ ಭಟ್ಕಳ ಶಹರ ಪೊಲೀಸರು ಇವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

Similar News