ಅಫ್ಘಾನ್ ನಲ್ಲಿ ಆತ್ಮಹತ್ಯಾ ಬಾಂಬ್ ದಾಳಿ: 6 ಮಂದಿ ಮೃತ್ಯು

Update: 2023-03-27 16:48 GMT

ಕಾಬೂಲ್, ಮಾ.27: ಅಫ್ಘಾನಿಸ್ತಾನದ ವಿದೇಶಾಂಗ ಸಚಿವಾಲಯದ ಬಳಿ ಸೋಮವಾರ ಸಂಭವಿಸಿದ ಆತ್ಮಹತ್ಯಾ ಬಾಂಬ್ದಾಳಿಯಲ್ಲಿ 6 ಮಂದಿ ಮೃತಪಟ್ಟಿದ್ದು ಹಲವರು ಗಾಯಗೊಂಡಿರುವುದಾಗಿ ಆಂತರಿಕ ಇಲಾಖೆ ಹೇಳಿದೆ.

ಅಫ್ಘಾನ್ ರಾಜಧಾನಿ ಕಾಬೂಲ್ನಲ್ಲಿರುವ ವಿದೇಶಾಂಗ ಇಲಾಖೆಯ ಬಳಿ ಕಳೆದ 3 ತಿಂಗಳಲ್ಲಿ ಸಂಭವಿಸಿರುವ ಎರಡನೇ ಬಾಂಬ್ ಸ್ಫೋಟ ಇದಾಗಿದೆ. ಅಫ್ಘಾನ್ ಪಡೆಗಳು ದಾಳಿಕೋರನನ್ನು ಗುರುತಿಸಿ ಆತನನ್ನು ತಡೆಯುವಷ್ಟರಲ್ಲಿ ಆತ ತನ್ನಲ್ಲಿದ್ದ ಸ್ಫೋಟಕವನ್ನು ಸಿಡಿಸಿಕೊಂಡಿದ್ದಾನೆ. ವಿದೇಶಾಂಗ ಇಲಾಖೆಯ ಬಳಿಯ ಶಾಪಿಂಗ್ ಮಾಲ್ನಲ್ಲಿ ಸ್ಫೋಟ ಸಂಭವಿಸಿದ್ದು 6 ನಾಗರಿಕರು ಮೃತಪಟ್ಟು ಹಲವರು ಗಾಯಗೊಂಡಿದ್ದಾರೆ ಎಂದು ಇಲಾಖೆಯ ವಕ್ತಾರ ಅಬ್ದುಲ್ ನಫಿ ಟಕೋರ್ ಟ್ವೀಟ್ ಮಾಡಿದ್ದಾರೆ.

ಸ್ಫೋಟದಲ್ಲಿ ಮೃತಪಟ್ಟ ಇಬ್ಬರ ಮೃತದೇಹಗಳನ್ನು ಆಸ್ಪತ್ರೆಗೆ ತರಲಾಗಿದೆ. ಒಂದು ಮಗುವಿನ ಸಹಿತ 12 ಗಾಯಾಳುಗಳನ್ನೂ ಚಿಕಿತ್ಸೆಗೆ ದಾಖಲಿಸಲಾಗಿದೆ ಎಂದು ಕಾಬೂಲ್ನ ಆಸ್ಪತ್ರೆಯ ಮೂಲಗಳನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ.

Similar News