ಸಂಸದ ಸ್ಥಾನದಿಂದ ಅನರ್ಹ: ದಿಲ್ಲಿಯಲ್ಲಿರುವ ಸರಕಾರಿ ಬಂಗ್ಲೆ ತೆರವಿಗೆ ಮುಂದಾದ ರಾಹುಲ್ ಗಾಂಧಿ

Update: 2023-03-28 07:12 GMT

ಹೊಸದಿಲ್ಲಿ: ಸಂಸದ ಸ್ಥಾನದಿಂದ ಅನರ್ಹಗೊಂಡ ನಂತರ ದಿಲ್ಲಿಯಲ್ಲಿರುವ ತಮ್ಮ ಬಂಗ್ಲೆಯನ್ನು ಖಾಲಿ ಮಾಡುವಂತೆ ರಾಹುಲ್ ಗಾಂಧಿಗೆ (Rahul Gandhi) ಸೂಚಿಸಲಾಗಿದೆ.  ನಾನು ಬಂಗ್ಲೆ ತೆರವು ಮಾಡಬೇಕೆಂಬ ನೋಟಿಸ್‌ಗೆ ಬದ್ಧರಾಗಿರುತ್ತೇನೆ ಎಂದು ರಾಹುಲ್ ಪತ್ರದಲ್ಲಿ ಬರೆದಿದ್ದಾರೆ.

ಎಪ್ರಿಲ್ 23 ರೊಳಗೆ ತುಘಲಕ್ ಲೇನ್ ಬಂಗಲೆಯನ್ನು ಖಾಲಿ ಮಾಡುವಂತೆ ಕಾಂಗ್ರೆಸ್ ನಾಯಕನಿಗೆ ನಿನ್ನೆ ನೋಟಿಸ್ ನೀಡಲಾಗಿತ್ತು.

2004ರಲ್ಲಿ ಸಂಸದನಾಗಿ ಆಯ್ಕೆಯಾದ ನಂತರ ರಾಹುಲ್ 2005ರಿಂದ ಈ ಬಂಗಲೆಯಲ್ಲಿದ್ದರು.

"ಕಳೆದ ನಾಲ್ಕು ಅವಧಿಗಳಲ್ಲಿ ಲೋಕಸಭೆಯ ಚುನಾಯಿತ ಸದಸ್ಯನಾಗಿ ನಾನು ಇಲ್ಲಿ ಕಳೆದ ಸಮಯದ ಸಂತೋಷದ ನೆನಪುಗಳಿಗೆ ನಾನು ಋಣಿಯಾಗಿದ್ದೇನೆ" ಎಂದು ರಾಹುಲ್ ಗಾಂಧಿ ಇಂದು ಪತ್ರದಲ್ಲಿ ಬರೆದಿದ್ದಾರೆ. 

"ಮೋದಿ ಉಪನಾಮ’’ ಹೇಳಿಕೆಗೆ ಸಂಬಂಧಿಸಿದ ಮಾನನಷ್ಟ ಮೊಕದ್ದಮೆಯಲ್ಲಿ ಗುಜರಾತ್‌ನ ನ್ಯಾಯಾಲಯವು ರಾಹುಲ್ ರನ್ನು ದೋಷಿ ಎಂದು ಘೋಷಿಸಿದ ಒಂದು ದಿನದ ನಂತರ ಶುಕ್ರವಾರ ಅವರನ್ನು ಸಂಸದರಾಗಿ ಅನರ್ಹಗೊಳಿಸಲಾಯಿತು.

ಅವರ ಅನರ್ಹತೆಯ ಎರಡು ದಿನಗಳ ನಂತರ ಲೋಕಸಭೆಯ ಗೃಹನಿರ್ಮಾಣ ಸಮಿತಿಯಿಂದ ಬಂಗ್ಲೆ ತೆರವುಗೊಳಿಸಬೇಕೆಂಬ ನೋಟೀಸ್ ಬಂದಿತು.

ಗುಜರಾತ್ ನ್ಯಾಯಾಲಯದ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸುವುದಾಗಿ ಕಾಂಗ್ರೆಸ್ ಹೇಳಿದೆ. ಮೇಲ್ಮನವಿ ಸಲ್ಲಿಸಲು 30 ದಿನಗಳ ಕಾಲಾವಕಾಶ ನೀಡಲಾಗಿದೆ.

Similar News