ಆಧಾರ್-ಪಾನ್ ಕಾರ್ಡ್ ಜೋಡಣೆಗೆ ಗಡುವು ಮುಂದೂಡಿಕೆ

Update: 2023-03-28 09:56 GMT

ಹೊಸದಿಲ್ಲಿ: ಪಾನ್‌ ಅನ್ನು ಆಧಾರ್‌ ಜೊತೆ ಜೋಡಿಸುವ ಕೊನೆಯ ದಿನಾಂಕವನ್ನು ಕೇಂದ್ರ ಸರ್ಕಾರ ವಿಸ್ತರಿಸಿದೆ. ಕೇಂದ್ರ ನೇರ ತೆರಿಗೆಗಳ ಮಂಡಳಿ ಈ ಕುರಿತು ಹೇಳಿಕೆ ಬಿಡುಗಡೆಗೊಳಿಸಿ ಆಧಾರ್-ಪಾನ್‌ ಜೋಡಣೆಯ ಕೊನೆಯ ದಿನಾಂಕವನ್ನು ಜೂನ್‌ 30 ಕ್ಕೆ ವಿಸ್ತರಿಸಲಾಗಿದೆ ಎಂದು ತಿಳಿಸಿದೆ.

ನಿಗದಿತ ಅವಧಿಯೊಳಗೆ ತೆರಿಗೆದಾರರೊಬ್ಬರು ಆಧಾರ್-ಪಾನ್‌ ಲಿಂಕ್‌ ಮಾಡಲು ವಿಫಲರಾದರೆ ಅಂತಹವರ ಪ್ಯಾನ್‌ ಕಾರ್ಯಾಚರಿಸುವುದಿಲ್ಲ.

ಜೂನ್‌ 30 ರ ವಿಸ್ತರಿತ ಗಡುವಿನ ನಂತರವೂ ಆಧಾರ-ಪ್ಯಾನ್‌ ಜೋಡಣೆಯಾಗದೇ ಇದ್ದಲ್ಲಿ ಅಂತಹ ಪಾನ್‌ ಕಾರ್ಡ್‌ಗಳನ್ನು ಹೊಂದಿದವರಿಗೆ ತೆರಿಗೆ ರಿಫಂಡ್‌ ಅನುಮತಿಸಲಾಗುವುದಿಲ್ಲ.

ಆದಾಯ ತೆರಿಗೆ ರಿಟರ್ನ್ಸ್‌ ಸಲ್ಲಿಸಿದ ನಂತರ ತೆರಿಗೆದಾರರೊಬ್ಬರು ಆಧಾರ್‌ ಮತ್ತು ಪ್ಯಾನ್‌ ಜೋಡಿಸಿದರೆ, ಲಿಂಕ್‌ ಮಾಡದ ಅವಧಿಯ ರಿಫಂಡ್‌ ಮೇಲಿನ ಬಡ್ಡಿಯನ್ನು ಆದಾಯ ತೆರಿಗೆ ಇಲಾಖೆ ಒದಗಿಸುವುದಿಲ್ಲ.

ಇಂತಹ ಸಂದರ್ಭಗಳಲ್ಲಿ ಟಿಡಿಎಸ್‌ ಮತ್ತು ಟಿಸಿಎಸ್‌  ಅನ್ನು ಅಧಿಕ ಬಡ್ಡಿದರ ವಿಧಿಸಲಾಗುವುದು.

ಜೂನ್‌ 30 ರ ನಂತರ ವಿಳಂಬ ಶುಲ್ಕವಾದ  ರೂ. 1000 ಪಾವತಿಸಿ ನಂತರ 30 ದಿನಗಳೊಳಗೆ ತೆರಿಗೆದಾರರೊಬ್ಬರು ತಮ್ಮ ಪ್ಯಾನ್‌ ಕಾರ್ಡ್‌ ಅನ್ನು ಮತ್ತೆ ಸಕ್ರಿಯಗೊಳಿಸಬಹುದು.

Similar News