ರಾಹುಲ್ ಗಾಂಧಿ ಕ್ಷಮೆ ಕೋರದಿದ್ದರೆ ಮಾನನಷ್ಟ ಮೊಕದ್ದಮೆ ಹೂಡುತ್ತೇನೆ: ಸಾವರ್ಕರ್ ಮೊಮ್ಮಗ ರಂಜಿತ್ ಸಾವರ್ಕರ್ ಎಚ್ಚರಿಕೆ

Update: 2023-03-28 10:50 GMT

ಹೊಸದಿಲ್ಲಿ: ಒಂದು ವೇಳೆ ಸಾವರ್ಕರ್ ಕುರಿತು ನೀಡಿರುವ ಹೇಳಿಕೆಯ ಬಗ್ಗೆ ರಾಹುಲ್ ಗಾಂಧಿ (Rahul Gandhi) ಒಂದು ವೇಳೆ ಕ್ಷಮೆ ಕೋರದಿದ್ದರೆ ಅವರ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸುವುದಾಗಿ ಮಂಗಳವಾರ ವಿ.ಡಿ. ಸಾವರ್ಕರ್ (VD Savarkar) ಅವರ ಮೊಮ್ಮಗ ರಂಜಿತ್ ಸಾವರ್ಕರ್ (Ranjit Savarkar) ಎಚ್ಚರಿಸಿದ್ದಾರೆ ಎಂದು indiatoday.in ವರದಿ ಮಾಡಿದೆ.

"ಸಾವರ್ಕರ್ ಕುರಿತ ಹೇಳಿಕೆಯ ಬಗ್ಗೆ ರಾಹುಲ್ ಗಾಂಧಿ ಒಂದು ವೇಳೆ ಕ್ಷಮೆ ಯಾಚಿಸದಿದ್ದರೆ ಅವರ ವಿರುದ್ಧ ಪ್ರಾಥಮಿಕ ಮಾಹಿತಿ ವರದಿ ದಾಖಲಿಸುತ್ತೇನೆ" ಎಂದು ರಂಜಿತ್ ಸಾವರ್ಕರ್ ಎಚ್ಚರಿಸಿದ್ದಾರೆ.

ನೀವು ಒಂದು ವೇಳೆ ಬ್ರಿಟನ್‌ನಲ್ಲಿ ನೀಡಿದ ಹೇಳಿಕೆ ಹಾಗೂ ಮೋದಿ ಉಪನಾಮದ ಕುರಿತು ನೀಡಿರುವ ಹೇಳಿಕೆಯ ಕುರಿತು ಕ್ಷಮೆ ಯಾಚಿಸುತ್ತೀರಾ ಎಂದು ಮಾರ್ಚ್ 25ರಂದು ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಕೇಳಿದ ಪ್ರಶ್ನೆಗೆ, "ನನ್ನ ಹೆಸರು ಸಾವರ್ಕರ್ ಅಲ್ಲ. ನನ್ನ ಹೆಸರು ಗಾಂಧಿ. ಗಾಂಧಿ ಯಾರಿಂದಲೂ ಕ್ಷಮೆ ಯಾಚಿಸುವುದಿಲ್ಲ" ಎಂದು ರಾಹುಲ್ ಗಾಂಧಿ ಪ್ರತ್ಯುತ್ತರ ನೀಡಿದ್ದರು.

ಮಾಜಿ ಸಂಸದರ ವರ್ತನೆಯು ಬಾಲಿಶವಾಗಿದೆ ಎಂದು ಟೀಕಿಸಿರುವ ಸಾವರ್ಕರ್ ಮೊಮ್ಮಗ ರಂಜಿತ್ ಸಾವರ್ಕರ್, ಸಾವರ್ಕರ್ ಬ್ರಿಟಿಷರ ಬಳಿ ಕ್ಷಮೆ ಯಾಚಿಸಿದ್ದರು ಎಂಬುದಕ್ಕೆ ಪುರಾವೆ ಒದಗಿಸಬೇಕು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಸವಾಲು ಹಾಕಿದ್ದಾರೆ.

ರಾಹುಲ್ ಗಾಂಧಿ ಇದೇ ಪ್ರಥಮ ಬಾರಿಗೆ ಸಾವರ್ಕರ್ ಬ್ರಿಟಿಷರ ಕ್ಷಮೆ ಯಾಚಿಸಿದ್ದರು ಎಂದು ಹೇಳುತ್ತಿರುವುದಲ್ಲ. ಸಾವರ್ಕರ್ ಅಂಡಮಾನ್ ಜೈಲಿನಲ್ಲಿದ್ದಾಗ ಬ್ರಿಟಿಷರಿಗೆ ಕ್ಷಮಾಪಣಾ ಪತ್ರಗಳನ್ನು ಬರೆದು, ಬ್ರಿಟಿಷ್ ಸರ್ಕಾರದಿಂದ ಪಿಂಚಣಿ ಪಡೆದಿದ್ದರು ಎಂದು ಕಳೆದ ವರ್ಷದ ನವೆಂಬರ್‌ನಲ್ಲಿ ನಡೆದ ಭಾರತ್ ಜೋಡೋ ಯಾತ್ರೆಯಲ್ಲೂ ಪ್ರತಿಪಾದಿಸಿದ್ದರು. ಸ್ವಾತಂತ್ರ್ಯ ಸಂಗ್ರಾಮ ಸಂದರ್ಭದಲ್ಲಿ ಸಾವರ್ಕರ್ ಬ್ರಿಟಿಷರಿಗೆ ನೆರವು ಒದಗಿಸಿದ್ದರು ಎಂದೂ ಹೇಳಿದ್ದರು ಎಂದು ರಂಜಿತ್ ಸಾವರ್ಕರ್ ಕಿಡಿ ಕಾರಿದ್ದಾರೆ.

ಇದನ್ನೂ ಓದಿ: ಕೋವಿಡ್‌ ಲಾಕ್‌ಡೌನ್‌ ಕುರಿತ ಚಿತ್ರ 'ಭೀಡ್‌'ಗೆ ಸೆನ್ಸಾರ್‌ ಕತ್ತರಿ ಪ್ರಯೋಗ

Similar News