ಅಮೆರಿಕಾದ ಪ್ರಶ್ನೆಗೆ ಮೋದಿ ಸರ್ಕಾರದ ಬಳಿ ಉತ್ತರವಿದೆಯೇ: ಸುಬ್ರಮಣಿಯನ್‌ ಸ್ವಾಮಿ ಪ್ರಶ್ನೆ

ರಾಹುಲ್‌ ಗಾಂಧಿ ಅನರ್ಹತೆ ಕುರಿತು ಬಿಜೆಪಿ ನಾಯಕನ ಪ್ರತಿಕ್ರಿಯೆ

Update: 2023-03-28 12:13 GMT

ಹೊಸದಿಲ್ಲಿ: ರಾಹುಲ್‌ ಗಾಂಧಿ (Rahul Gandhi) ಅವರ ಸಂಸದ ಸ್ಥಾನ ಅನರ್ಹಗೊಳಿಸುವಿಕೆಯನ್ನು ದೇಶ-ವಿದೇಶದ ರಾಜಕಾರಣಿಗಳು, ಚಿಂತಕರು ಖಂಡಿಸಿದ್ದಾರೆ. ಈ ನಡುವೆ, ಬಿಜೆಪಿ (BJP) ನಾಯಕ ಸುಬ್ರಮಣಿಯನ್‌ ಸ್ವಾಮಿ (Subramanian Swamy) ಅವರು ಕೇಂದ್ರ ಸರ್ಕಾರದ ಕಾಲೆಳೆದಿದ್ದಾರೆ.

ರಾಹುಲ್‌ ಗಾಂಧಿಯನ್ನು ಬುದ್ಧು ಎಂದು ಕರೆಯುವ ಸುಬ್ರಮಣಿಯನ್‌ ಸ್ವಾಮಿ, “ಬುದ್ಧುವಿನ ವಿರುದ್ಧ ಮೋದಿ ಸರ್ಕಾರದ ಕ್ರಮವನ್ನು ಅಮೆರಿಕ ವಿದೇಶಾಂಗ ಇಲಾಖೆ ಖಂಡಿಸಿದೆ. ಮೋದಿ ಸರ್ಕಾರದ ಉತ್ತರವೇನು?” ಎಂದು ಪ್ರಶ್ನಿಸಿದ್ದಾರೆ. 

ಅದಕ್ಕೆ ನೆಟ್ಟಿಗರೊಬ್ಬರು ಪ್ರತಿಕ್ರಿಯಿಸಿದ್ದು, ಚಿಂತೆ ಮಾಡಬೇಡಿ, ಡಾ. ಜೈಶಂಕರ್‌ ಇದನ್ನು ನಿಭಾಯಿಸುತ್ತಾರೆ ಎಂದು ಹೇಳಿದ್ದಾರೆ. 

ನೆಟ್ಟಿಗರ ಈ ಟ್ವೀಟ್‌ಗೆ ಪ್ರತಿಕ್ರಿಯಿಸಿದ ಸ್ವಾಮಿ, “(ನಿಭಾಯಿಸುವುದು ಹೇಗೆ) ಚೀನಾದೊಂದಿಗೆ ತೆವಳುತ್ತಾ ಭಿಕ್ಷೆ ಬೇಡಿದಂತೆಯಾ?” ಎಂದು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. 

 ಮತ್ತೊಬ್ಬ ಟ್ವಿಟರ್‌ ಬಳಕೆದಾರ ಪ್ರತಿಕ್ರಿಯಿಸಿ, “ಸರ್‌, ನೀವೇನು ಯಾವುದೇ ಸರ್ಕಾರಕ್ಕಿಂತ ಕಡಿಮೆ ಇಲ್ಲ, ನೀವು ಯುಎಸ್ ಸ್ಟೇಟ್ ಡಿಪಾರ್ಟ್ಮೆಂಟ್ ವಿರುದ್ಧ ಕಟುವಾದ ಟೀಕೆಗಳನ್ನು ಮಾಡುವ ನಿರೀಕ್ಷೆಯಿದೆ.” ಎಂದು ಸ್ವಾಮಿ ಕಾಲೆಳೆದಿದ್ದಾರೆ.

ಅದಕ್ಕೆ ಪ್ರತಿಕ್ರಿಯೆ ನೀಡಿದ ಸ್ವಾಮಿ, “ಮೋದಿ ಸರ್ಕಾರವು ಚೀನಾದ ಮುಂದೆ ಮಂಡಿಯೂರಿದಂತೆ (ಅಮೇರಿಕಾದ ಎದುರು) ಬಾಗುತ್ತದೆ. ನಂತರ ನಾನೇನು ಟೀಕೆ ಮಾಡಲಿ?” ಎಂದು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ರಾಹುಲ್ ಗಾಂಧಿ ಕ್ಷಮೆ ಕೋರದಿದ್ದರೆ ಮಾನನಷ್ಟ ಮೊಕದ್ದಮೆ ಹೂಡುತ್ತೇನೆ: ಸಾವರ್ಕರ್ ಮೊಮ್ಮಗ ರಂಜಿತ್ ಸಾವರ್ಕರ್ ಎಚ್ಚರಿಕೆ

Similar News