ಕುಂದಾಪುರ: ದಾಖಲೆಯಿಲ್ಲದೆ 13 ಲಕ್ಷ ರೂ. ಸಾಗಾಟ; ಪೊಲೀಸರ ವಶಕ್ಕೆ

Update: 2023-03-29 13:06 GMT

ಕುಂದಾಪುರ: ವ್ಯಕ್ತಿಯೋರ್ವ ದ್ವಿಚಕ್ರ ವಾಹನದಲ್ಲಿ ದಾಖಲೆಯಿಲ್ಲದೆ, ಅಕ್ರಮವಾಗಿ ಹಣ ಸಾಗಿಸುತ್ತಿದ್ದ ಆರೋಪದಲ್ಲಿ ಕುಂದಾಪುರ ಪೊಲೀಸರು 13 ಲಕ್ಷ ರೂ. ವಶಕ್ಕೆ ಪಡೆದ ಘಟನೆ ಮಾ.29ರಂದು ಇಲ್ಲಿನ ಸಂಗಮ್‌ ಬಳಿಯ ಚೆಕ್ ಪೋಸ್ಟ್ ನಲ್ಲಿ ನಡೆದಿದೆ.

ಮೂಲತಃ ಮಹಾರಾಷ್ಟ್ರದ, ಪ್ರಸ್ತುತ ಕೋಟೇಶ್ವರ ಸಮೀಪದ ನಿವಾಸಿ ದಿಲೀಪ್ ಗೋಡ್ಸೆ (47) ಎಂಬಾತ ತನ್ನ ಬೈಕಿನಲ್ಲಿ ಯಾವುದೇ ದಾಖಲೆಗಳಿಲ್ಲದೆ 13  ಲಕ್ಷ ಸಾಗಿಸುತ್ತಿದ್ದ. ಕುಂದಾಪುರ ಸಂಗಮ್ ಜಂಕ್ಷನ್ ಬಳಿ ಪೊಲೀಸ್ ಚೆಕ್ ಪೊಸ್ಟ್ ಬಳಿ ಪೊಲೀಸರು ವಾಹನ ತಪಾಸಣೆಯಲ್ಲಿ ತೊಡಗಿದ್ದಾಗ ಬೈಕ್ ಅಡ್ಡಗಟ್ಟಿ ಪರಿಶೀಲಿಸಿದ್ದು ಹಣ ಸಾಗಾಟ ತಿಳಿದುಬಂದಿದೆ. ವಿಚಾರಣೆ ವೇಳೆ ಈ ಹಣಕ್ಕೆ ಯಾವುದೇ ದಾಖಲೆಗಳಿಲ್ಲ ಎಂದು ತಿಳಿದುಬಂದಿದ್ದು ವಶಕ್ಕೆ ಪಡೆದ ಪೊಲೀಸರು ಕಾನೂನು ಕ್ರಮ ಕೈಗೊಂಡಿದ್ದಾರೆ.

ಕುಂದಾಪುರ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

Similar News