ಮಣಿಪಾಲ: ಇಸ್ಪೀಟು ಜುಗಾರಿ; 21 ಮಂದಿ ಬಂಧನ

Update: 2023-03-29 15:19 GMT

ಮಣಿಪಾಲ, ಮಾ.29: ಪರ್ಕಳ ಸಂಧ್ಯಾ ಹೊಟೇಲ್ ಕಟ್ಟಡದ ಒಂದನೇ ಮಹಡಿಯ ಕೋಣೆಯಲ್ಲಿ ಮಾ.28ರಂದು ರಾತ್ರಿ ವೇಳೆ ಇಸ್ಪೀಟು ಜುಗಾರಿ ಆಡುತ್ತಿದ್ದ 21 ಮಂದಿಯನ್ನು ಮಣಿಪಾಲ ಪೊಲೀಸರು ಬಂಧಿಸಿದ್ದಾರೆ.

ಅನಿಲ, ವಿಶ್ವನಾಥ, ದೀಕ್ಷಿತ್, ಜೀವರಾಜ್, ವರುಣ್, ರವಿಚಂದ್ರ ನಾಯ್ಕ್, ದಿನೇಶ, ಗಣೇಶ, ಅನೀಶ, ಸತೀಶ್, ಅನಿಲ್, ಸತೀಶ್, ರಮೇಶ, ಸುಧಾಕರ್, ಹರೀಶ, ನಿತೇಶ್, ಪ್ರಶಾಂತ, ಜ್ಞಾನೇಶ, ಶಿವಶೆಟ್ಟಿ, ಸಲೀಂ, ಕರುಣಾಕರ್ ಬಂಧಿತ ಆರೋಪಿಗಳು.

ಬಂಧಿತರಿಂದ 1,37,800ರೂ. ಮತ್ತು 7 ವಾಹನಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.

Similar News