ಉಡುಪಿ: ಆನ್‌ಲೈನ್‌ನಲ್ಲಿ ಮಹಿಳೆಗೆ ಲಕ್ಷಾಂತರ ರೂ. ವಂಚನೆ

Update: 2023-03-29 15:22 GMT

ಉಡುಪಿ, ಮಾ.29: ಮುಖಕ್ಕೆ ಹಚ್ಚುವ ಕ್ರೀಂ ಹೆಸರಿನಲ್ಲಿ ಮಹಿಳೆಯೊಬ್ಬರಿಗೆ ಆನ್‌ಲೈನ್ ಮೂಲಕ ಲಕ್ಷಾಂತರ ರೂ. ವಂಚಿಸಿರುವ ಬಗ್ಗೆ ಉಡುಪಿ ಸೆನ್ ಅಪರಾಧ ಪೊಲೀಸ್ ಠಾಮೆಯಲ್ಲಿ ಪ್ರಕರಣ ದಾಖಲಾಗಿದೆ.

ಜ್ಯೋತಿ ಉಡುಪಿ(32) ಎಂಬವರು ಮುಖಕ್ಕೆ ಹಚ್ಚುವ ಕ್ರೀಂನ್ನು ಆನ್‌ಲೈನ್ ನಲ್ಲಿ ಹುಡುಕುತ್ತಿದ್ದ ಸಂದರ್ಭದಲ್ಲಿ ಕಂಡುಬಂದ ಮೊಬೈಲ್ ನಂಬ್ರಕ್ಕೆ ಕರೆ ಮಾಡಿದ್ದರು. ಕರೆ ಸ್ವೀಕರಿಸಿದ ವ್ಯಕ್ತಿ ರಿಜಿಸ್ಟರ್ ಮಾಡುವಂತೆ ಲಿಂಕ್ ಕಳುಹಿಸಿದ್ದು, ಅದರಂತೆ ಜ್ಯೋತಿ ರಿಜಿಸ್ಟರ್ ಮಾಡಿದ್ದರು. ಮಾ.22ರಂದು ಅಪರಿಚಿತ ವ್ಯಕ್ತಿ ಯೊಬ್ಬ ಜ್ಯೋತಿಗೆ ಕರೆ ಮಾಡಿ, ಇನ್ನೊಂದು ಲಿಂಕ್ ಕಳುಹಿಸಿದ್ದು, ಅದನ್ನು ನಂಬಿದ ಜ್ಯೋತಿ, ಲಿಂಕ್‌ನಲ್ಲಿ ವಿವರವನ್ನು ಅಪ್‌ಡೇಟ್ ಮಾಡಿದ್ದರು.

ಈ ಕೂಡಲೇ ಇವರ ಖಾತೆಯಿಂದ ಒಟ್ಟು 1,97,999ರೂ. ಹಣವನ್ನು ಆನ್‌ಲೈನ್ ಮೂಲಕ ವರ್ಗಾವಣೆ ಮಾಡಿಕೊಂಡು ಮೋಸ ಮಾಡಿರುವುದಾಗಿ ದೂರಲಾಗಿದೆ.

Similar News