ಪೋರ್ಚುಗಲ್: ಚೂರಿ ಇರಿತ ಇಬ್ಬರು ಮೃತ್ಯು; ಒಬ್ಬನಿಗೆ ಗಾಯ‌

Update: 2023-03-29 17:02 GMT

ಲಿಸ್ಬನ್, ಮಾ.29: ಪೋರ್ಚುಗಲ್ ರಾಜಧಾನಿ ಲಿಸ್ಬನ್ ನಲ್ಲಿ  ನಡೆದ ಚೂರಿದಾಳಿ ಪ್ರಕರಣದಲ್ಲಿ ಇಬ್ಬರು ಮಹಿಳೆಯರು ಮೃತಪಟ್ಟಿದ್ದು ಒಬ್ಬ ವ್ಯಕ್ತಿ ಗಾಯಗೊಂಡಿರುವುದಾಗಿ ವರದಿಯಾಗಿದೆ.

ಅಲ್ಪಸಂಖ್ಯಾತ ಸಮುದಾಯದರಿಗೆ ಸಂಬಂಧಿಸಿದ ಲಿಸ್ಬನ್ನ ಇಸ್ಮಾಲಿ ಸೆಂಟರ್ನಲ್ಲಿ ಮಂಗಳವಾರ ಈ ಘಟನೆ ನಡೆದಿದೆ. ಚೂರಿಯಿಂದ ದಾಳಿ ನಡೆಸಿದವನನ್ನು ಅಫ್ಘಾನ್ ಪ್ರಜೆ ಎಂದು ಶಂಕಿಸಲಾಗಿದ್ದು ಈತನ ಪತ್ನಿ ಗ್ರೀಸ್ ನ ನಿರಾಶ್ರಿತರ ಶಿಬಿರದಲ್ಲಿ ಇತ್ತೀಚೆಗೆ ಮೃತಪಟ್ಟಿದ್ದಳು. ಯುರೋಪಿಯನ್ ಸಹಕಾರ ಯೋಜನೆಯಡಿ ಪೋರ್ಚುಗಲ್ಗೆ ಸ್ಥಳಾಂತರಗೊಂಡ  ಬಳಿಕ ತನ್ನ ಮೂವರು ಮಕ್ಕಳೊಂದಿಗೆ ಈತ ಇಸ್ಮಾಲಿ ಸೆಂಟರ್ಗೆ ಆಗಾಗ ಬಂದು ನೆರವು ಪಡೆಯುತ್ತಿದ್ದ. ಆದರೆ ಯಾರೊಂದಿಗೂ ಹೆಚ್ಚಾಗಿ ಬೆರೆಯದೆ ಏಕಾಂಗಿಯಾಗಿರುತ್ತಿದ್ದ.

ಮಂಗಳವಾರ ಚೂರಿಯಿಂದ ಇಬ್ಬರನ್ನು ಹತ್ಯೆ ಮಾಡಿದ ಬಳಿಕ ಭದ್ರತಾ ಸಿಬಂದಿಯ ಮೇಲೆ ಮುನ್ನುಗ್ಗಿದಾಗ ಗುಂಡು ಹಾರಿಸಿ ಆತನನ್ನು ನಿಷ್ಕ್ರಿಯಗೊಳಿಸಲಾಗಿದೆ. ತೀವ್ರ ಗಾಯಗೊಂಡಿದ್ದ ಆರೋಪಿಯನ್ನು ವಶಕ್ಕೆ ಪಡೆದು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಧಿಕಾರಿಗಳನ್ನು ಉಲ್ಲೇಖಿಸಿದ ಮಾಧ್ಯಮ ವರದಿ ಹೇಳಿದೆ.

Similar News