ರಾಹುಲ್ ಗಾಂಧಿ ಅನರ್ಹತೆ ಕುರಿತು ಮಾತನಾಡದಿರುವ ಕಾರಣ ಬಿಚ್ಚಿಟ್ಟ ನಿತೀಶ್ ಕುಮಾರ್

Update: 2023-03-30 07:45 GMT

ಪಾಟ್ನಾ: ಲೋಕಸಭಾ ಸದಸ್ಯತ್ವದಿಂದ ರಾಹುಲ್ ಗಾಂಧಿ (Rahul Gandhi) ಅನರ್ಹಗೊಂಡಿರುವ ವಿಷಯ ನ್ಯಾಯಾಲಯದ ಆದೇಶದೊಂದಿಗೆ ತಳುಕು ಹಾಕಿಕೊಂಡಿರುವುದರಿಂದ ಆ ಕುರಿತು ಮಾತನಾಡುವುದರಿಂದ ನಿರ್ಬಂಧಿಸಿಕೊಂಡಿದ್ದೇನೆ ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ (Nitish Kumar) ಹೇಳಿದ್ದಾರೆ ಎಂದು ndtv.com ವರದಿ ಮಾಡಿದೆ. ಹೀಗಿದ್ದೂ ಈ ವಿಷಯದ ಕುರಿತು ತನ್ನ ಪಕ್ಷವಾದ ಜೆಡಿಯು ಪ್ರತಿಕ್ರಿಯೆ ನೀಡಿದೆ ಎಂದೂ ಅವರು ಹೇಳಿದ್ದಾರೆ.

ಪಾಟ್ನಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿಯವರ “ಭ್ರಷ್ಟರೆಲ್ಲ ಕೈ ಜೋಡಿಸುತ್ತಿದ್ದಾರೆ” ಎಂಬ ಹೇಳಿಕೆಗೆ ತಿರುಗೇಟು ನೀಡಿದರೂ, ವಿರೋಧ ಪಕ್ಷಗಳು ಒಗ್ಗಟ್ಟಾಗಬೇಕಾದ ಅವಶ್ಯಕತೆಯಿದೆ ಎಂದು ಪುನರುಚ್ಚರಿಸಿದರಲ್ಲದೆ, ಕಾಂಗ್ರೆಸ್ ಈ ದಿಕ್ಕಿನತ್ತ ಹೆಜ್ಜೆ ಇಡಬೇಕು ಎಂದು ಕರೆ ನೀಡಿದರು.

“ಮಾತಗಳನ್ನಾಡುತ್ತಲೇ ಇರುವುದು ಮೋದಿಯ ಚಾಳಿಯಾಗಿದೆ. ಈ ಜನರು ಕೇವಲ ಸ್ವಪ್ರಶಂಸೆಯಲ್ಲಿ ನಂಬಿಕೆಯಿಟ್ಟಿದ್ದಾರೆ. ಅವರು ಇತರರ ಒಳ್ಳೆಯತನದ ಬಗ್ಗೆ ಮಾತನಾಡಲು ಸಾಧ್ಯವಿಲ್ಲ. ನಾವು ನಮ್ಮ ಕೆಲಸ ಮಾಡುತ್ತೇವೆ ಹಾಗೂ ಇತರರ ಒಳ್ಳೆಯ ಕೆಲಸಗಳನ್ನೂ ಶ್ಲಾಘಿಸುತ್ತೇವೆ. ದಿ. ಅಟಲ್ ಬಿಹಾರಿ ವಾಜಪೇಯಿ ಸರ್ಕಾರದಲ್ಲಿ ಆಗಿದ್ದ ಸಾಧನೆಯನ್ನು ನಾನೀಗಲೂ ಸ್ಮರಿಸುತ್ತೇನೆ” ಎಂದು ವಾಜಪೇಯಿ ಸಚಿವ ಸಂಪುಟದಲ್ಲಿ ಸಚಿವರಾಗಿದ್ದ ನಿತೀಶ್ ಕುಮಾರ್ ಹೇಳಿದ್ದಾರೆ.

ಭ್ರಷ್ಟಾಚಾರದ ವಿರುದ್ಧ ಹೇಳಿಕೆ ನೀಡುವಾಗ ತಾನು ಎಂತಹ ವ್ಯಕ್ತಿಗಳೊಂದಿಗೆ ಮೈತ್ರಿ ಮಾಡಿಕೊಂಡಿದ್ದೇನೆ ಎಂಬ ದಾಖಲೆಯನ್ನು ಅವರು ತಮ್ಮ ಜೊತೆಯಲ್ಲಿ ಇಟ್ಟುಕೊಂಡಿರಬೇಕು ಎಂದು ಪರೋಕ್ಷವಾಗಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು. 

ಇದನ್ನೂ ಓದಿ: ಮೋದಿಯವರನ್ನು ಸಿಲುಕಿಸಲು ಯುಪಿಎ ಅಧಿಕಾರಾವಧಿಯಲ್ಲಿ ಸಿಬಿಐ ಒತ್ತಡ: ಅಮಿತ್ ಶಾ

Similar News