ಕುಂದಾಪುರ ಪುರಸಭೆ: ಕಟ್ಟಡ ತೆರಿಗೆ, ಉದ್ದಿಮೆ ಪರವಾನಿಗೆ ನವೀಕರಣಕ್ಕೆ ಸೂಚನೆ
Update: 2023-03-30 21:48 IST
ಉಡುಪಿ: ಕುಂದಾಪುರ ಪುರಸಭಾ ವ್ಯಾಪ್ತಿಯ ಖಾತಾದಾರರು ಪುರಸಭಾ ವ್ಯಾಪ್ತಿಯಲ್ಲಿ ಪ್ರಸಕ್ತ ಸಾಲಿನಲ್ಲಿ ಮತ್ತು ಹಿಂದಿನ ವರ್ಷಗಳ ಬಾಕಿ ಉಳಿಸಿಕೊಂಡಿರುವ ಕಟ್ಟಡದ ತೆರಿಗೆ, ಉದ್ದಿಮೆ ಪರವಾನಿಗೆಯ ನವೀಕರಣ ಮತ್ತು ಶಾಶ್ವತ ಜಾಹೀರಾತು ಫಲಕಗಳ ನವೀಕರಣ ಮಾಡಿಸದೆ ಇದ್ದಲ್ಲಿ ಮಾರ್ಚ್ ೩೧ರೊಳಗೆ ದಂಡ ಸಹಿತ ತೆರಿಗೆ ಪಾವತಿಸಿ, ನವೀಕರಣ ಗೊಳಿಸಿಕೊಳ್ಳುವಂತೆ ಪುರಸಭೆ ಮುಖ್ಯಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.