ಕಾಸರಗೋಡು| ಬೈಕ್ - ಟ್ಯಾಂಕರ್ ಡಿಕ್ಕಿ: ಇಬ್ಬರು ಮೃತ್ಯು

Update: 2023-03-31 05:51 GMT

ಕಾಸರಗೋಡು,ಮಾ.31: ಬೈಕ್ ಮತ್ತು ಟ್ಯಾಂಕರ್ ಲಾರಿ ನಡುವೆ ಉಂಟಾದ ಅಪಘಾತದಲ್ಲಿ  ಇಬ್ಬರು ಮೃತಪಟ್ಟಿರುವ ಘಟನೆ ರಾಷ್ಟ್ರೀಯ ಹೆದ್ದಾರಿ ಚೆರ್ವತ್ತೂರು ಕೊವ್ವಲ್ ನಲ್ಲಿ ನಿನ್ನೆ ರಾತ್ರಿ (ಗುರುವಾರ) ನಡೆದಿದೆ.

ನೀಲೇಶ್ವರ ಚಾಯೋತ್ ನ ದೀಪಕ್ (33) ಮತ್ತು ಕನ್ನಾಟಿಪಾರೆಯ ಶೋಭಿತ್  (27) ಮೃತ ಪಟ್ಟವರು.

ದೀಪಕ್ ಖಾಸಗಿ ಬಸ್ಸಿನ ಚಾಲಕರಾಗಿ ಮತ್ತು ಶೋಭಿತ್ ಹಣಕಾಸು ಸಂಸ್ಥೆಯಲ್ಲಿ ಉದ್ಯೋಗ ಮಾಡುತ್ತಿದ್ದರು. ಸ್ನೇಹಿತರಾಗಿದ್ದ ಇವರು ರಾತ್ರಿ ಮನೆಗೆ ತೆರಳುತ್ತಿದ್ದಾಗ ಈ ಅಪಘಾತ ನಡೆದಿದೆ. ಮೃತ ದೇಹಗಳನ್ನು ಸರಕಾರಿ ಆಸ್ಪತ್ರೆಯ ಶವಾಗಾರದಲ್ಲಿರಿಸಲಾಗಿದ್ದು, ಮರಣೋತ್ತರ ಪರೀಕ್ಷೆ ಬಳಿಕ ಸಂಬಂಧಿಕರಿಗೆ ಬಿಟ್ಟುಕೊಡಲಿದೆ ಎಂದು ತಿಳಿದು ಬಂದಿದೆ.

Similar News