ಚೆನ್ನೈ ನಲ್ಲಿ ಲೈಂಗಿಕ ಕಿರುಕುಳದ ಕುರಿತು ವಿದ್ಯಾರ್ಥಿಗಳ ಪ್ರತಿಭಟನೆ: ಕಾನೂನು ಕ್ರಮದ ಭರವಸೆ ನೀಡಿದ ಸ್ಟಾಲಿನ್

Update: 2023-03-31 08:21 GMT

ಚೆನ್ನೈ: ಚೆನ್ನೈನ ಕಲಾ ಹಾಗೂ  ಸಾಂಸ್ಕೃತಿಕ ಅಕಾಡೆಮಿ ಕಲಾಕ್ಷೇತ್ರ ಫೌಂಡೇಶನ್‌ನಲ್ಲಿ ಲೈಂಗಿಕ ಕಿರುಕುಳದ ಕುರಿತು ಯಾವುದೇ ದೂರು ಬಂದರೆ ಕ್ರಮ ಕೈಗೊಳ್ಳುವುದಾಗಿ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಶುಕ್ರವಾರ ಭರವಸೆ ನೀಡಿದ್ದಾರೆ, ಈ ವಿಷಯದ ಕುರಿತು ಒಂದು ದಿನದ ಹಿಂದೆ ಸುಮಾರು 200 ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದರು.

"ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು. ಆದರೆ  ಪೊಲೀಸರಿಗೆ ಇನ್ನೂ ಯಾವುದೇ ಲಿಖಿತ ದೂರು ಬಂದಿಲ್ಲ" ಎಂದು ಅವರು ಹೇಳಿದರು,

ನಾಲ್ವರು ಪುರುಷ ಅಧ್ಯಾಪಕರಿಂದ ಲೈಂಗಿಕ ಕಿರುಕುಳವನ್ನು ಎದುರಿಸಿರುವ ಸಂತ್ರಸ್ತರು ನ್ಯಾಯಕ್ಕಾಗಿ ಆಗ್ರಹಿಸಿದ ಒಂದು ದಿನದ ನಂತರ ಸ್ಟಾಲಿನ್ ಪ್ರತಿಕ್ರಿಯಿಸಿದರು.

ತಮ್ಮ ದೂರುಗಳನ್ನು ವಜಾಗೊಳಿಸಿದ್ದಾರೆ ಎಂದು ಆರೋಪಿಸಿ ಆಡಳಿತ ಹಾಗೂ  ರಾಷ್ಟ್ರೀಯ ಮಹಿಳಾ ಆಯೋಗದ (ಎನ್‌ಸಿಡಬ್ಲ್ಯೂ) ವಿರುದ್ಧ ಫಲಕಗಳನ್ನು ಹಿಡಿದು ವಿದ್ಯಾರ್ಥಿಗಳು ಘೋಷಣೆಗಳನ್ನು ಕೂಗಿದರು.

ಎನ್‌ಸಿಡಬ್ಲ್ಯೂ ಅಧ್ಯಕ್ಷೆ ರೇಖಾ ಶರ್ಮಾ ಅವರು ಕಲಾಕ್ಷೇತ್ರ ಕ್ಯಾಂಪಸ್‌ಗೆ ಅನಿರೀಕ್ಷಿತ ಭೇಟಿ ನೀಡಿದ ಒಂದು ದಿನದ ನಂತರ ಪ್ರತಿಭಟನೆ ನಡೆದಿದೆ. ರೇಖಾ ಅವರು ನಿರ್ದೇಶಕಿ ರೇವತಿ ರಾಮಚಂದ್ರನ್ ಮತ್ತು ಕೆಲವು ಅಧ್ಯಾಪಕರನ್ನು ಭೇಟಿಯಾದರು.

Similar News