ಎ3ರಿಂದ ʼಸಮುದ್ರ ನಾಲಗೆʼಯಿಂದ ರಚಿಸಲ್ಪಟ್ಟ ಶಿಲ್ಪ ಕಲಾಕೃತಿಗಳ ಪ್ರದರ್ಶನ

Update: 2023-03-31 11:50 GMT

ಉಡುಪಿ, ಮಾ.31: ಹಿರಿಯ ಕಲಾವಿದ ಸಕು ಪಾಂಗಾಳ ಅವರಿಂದ ಸಮುದ್ರ ನಾಲಗೆ ಎಂದೇ ಕರೆಯಲ್ಪಡುವ ಕಪ್ಪೆ ಬಂಡಾಸೆ ಮೀನಿನ ನಿರುಪಯುಕ್ತ ಚಿಪ್ಪಿನಿಂದ ರಚಿಸಲ್ಪಟ್ಟ ಶಿಲ್ಪ ಕಲಾಕೃತಿ(ರಿಲೀಫ್)ಗಳ ಪ್ರದರ್ಶನವನ್ನು ಅಂಬಲಪಾಡಿಯ ಗ್ಯಾಲರಿ ಶ್ರೀ-ರಾಜ್-ರಾಮ್‌ನಲ್ಲಿ ಎ.3ರಿಂದ 9ರವರೆಗೆ ಹಮ್ಮಿಕೊಳ್ಳಲಾಗಿದೆ.

ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಚ್.ಕೆ. ರಾಮಚಂದ್ರ, ಇವರು ಈ ಮಾಧ್ಯಮದಿಂದ ಶಿಲ್ಪ ಕಲಾಕೃತಿ ರಚಿಸಿ ಪ್ರದರ್ಶಿಸಿದ ಮೊದಲ ಚಿತ್ರಕಲಾವಿದರೆನಿಸಿದ್ದಾರೆ. ಈ ಪ್ರದರ್ಶದಲ್ಲಿ ಒಟ್ಟು 30 ಕಲಾಕೃತಿ ಗಳನ್ನು ಪ್ರದರ್ಶಿಸಲಾಗುತ್ತದೆ ಎಂದು ತಿಳಿಸಿದರು.

ಎ.3ರಂದು ಬೆಳಗ್ಗೆ 10.30ಕ್ಕೆ ಪ್ರದರ್ಶನವನ್ನು ಕುಂದಾಪುರ ಗುರುಕುಲ ಪಬ್ಲಿಕ್ ಸ್ಕೂಲ್‌ನ ಮ್ಯಾನೇಜಿಂಗ್ ಟ್ರಸ್ಟಿ ಅನುಪಮ ಎಸ್.ಶೆಟ್ಟಿ ಉದ್ಘಾಟಿಸ ಲಿರುವರು. ಸಮಾರಂಭದಲ್ಲಿ ರವಿಚಂದ್ರ ಬಳಗದವರಿಂದ ಡೊಲ್ಲು ವಾದನ ನಡೆಯಲಿದೆ. ಪ್ರದರ್ಶನವು ಎ.3ರಿಂದ ಎ.9ರವರೆಗೆ ಅಪರಾಹ್ನ 2ಗಂಟೆಯಿಂದ ಸಂಜೆ 7ಗಂಟೆಯವರೆಗೆ ತೆರೆದಿರುತ್ತದೆ. ಇದೇ ಪ್ರದರ್ಶನ ಮಂಗಳೂರಿನ ಪ್ರಸಾದ್ ಆರ್ಟ್ ಗ್ಯಾಲರಿಯಲ್ಲಿ ಎ.14ರಿಂದ 16ರವರೆಗೆ ನಡೆಯಲಿದೆ.

ಕಲಾವಿದ ಸಕು ಪಾಂಗಾಳ ಮಾತನಾಡಿ, ಈ ವಸ್ತುವಿನಿಂದಲೇ ಮಾನವನ ಬೇರೆ ಬೇರೆ ಭಾಗದ ಮೂಳೆಗಳ ರಚನೆಗಾಗಿ 1997ರಲ್ಲಿ ಕರ್ನಾಟಕ ಸರಕಾರ ದಿಂದ ರಾಜ್ಯಮಟ್ಟದ ಪ್ರಶಸ್ತಿ ದೊರೆತಿತ್ತು. ಅಲ್ಲಿಂದ ನಾನು ಸಮುದ್ರ ತೀರದಲ್ಲಿ ಈ ವಸ್ತುಗಳನ್ನು ಹುಡುಕಿ ತಂದು ಕಲಾಕೃತಿಗಳನ್ನು ರಚಿಸಿದ್ದೇನೆ ಎಂದು ಹೇಳಿದರು.

ಈ ಪ್ರದರ್ಶನದಲ್ಲಿ ಮಾರಾಟವಾದ ಶಿಲ್ಪಕಲಾಕೃತಿಗಳ ಮೊತ್ತವನ್ನು ಉಡುಪಿ ಜಿಲ್ಲೆಯ ಗ್ರಾಮೀಣ ಕನ್ನಡ ಮಾಧ್ಯಮ ಶಾಲೆಯ ಅಗತ್ಯವಿರುವ ವಿದ್ಯಾರ್ಥಿ ಗಳಿಗೆ ಆಂಗ್ಲ ಭಾಷೆಯ ನಿಘಂಟು ಉಚಿತವಾಗಿ ವಿತರಣೆಗಾಗಿ ಬಳಸಿಕೊಳ್ಳ ಲಾಗುವುದು ಎಂದು ಅವರು ತಿಳಿಸಿದರು.

Similar News