ಕಳ್ಳಸಾಗಣೆಯಾಗಿದ್ದ 15 ಶಿಲ್ಪ ಕಲಾಕೃತಿಗಳನ್ನು ಭಾರತಕ್ಕೆ ವಾಪಸ್‌ ನೀಡಲಿರುವ ಅಮೆರಿಕಾದ ಖ್ಯಾತ ಮ್ಯೂಸಿಯಂ

Update: 2023-04-01 08:56 GMT

ನ್ಯೂಯಾರ್ಕ್: ಅಮೆರಿಕಾದ ಖ್ಯಾತ ಮೆಟ್ರೋಪಾಲಿಟನ್‌ ಮ್ಯೂಸಿಯಂ ಆಫ್‌ ಆರ್ಟ್‌  ಭಾರತಕ್ಕೆ 15 ಶಿಲ್ಪ ಕಲಾಕೃತಿಗಳನ್ನು ವಾಪಸ್‌ ನೀಡಲಿದೆ. ಈ ಪ್ರಾಚೀನ ಶಿಲ್ಪಗಳನ್ನು ಅಕ್ರಮವಾಗಿ ಪಡೆದು ಸುಭಾಶ್‌ ಕಪೂರ್‌ ಎಂಬ ಮಾರಾಟಗಾರ ಮಾರಾಟ ಮಾಡಿದ್ದನೆಂದು ತಿಳಿದು ಬಂದ ನಂತರ ಮ್ಯೂಸಿಯಂ ಈ ಕ್ರಮಕೈಗೊಂಡಿದೆ.

ಭಾರತ ಸರ್ಕಾರಕ್ಕೆ ಈ ಶಿಲ್ಪಗಳನ್ನು ವಾಪಸ್‌ ನೀಡುವ ಕುರಿತು ಮೆಟ್ರೋಪಾಲಿಟನ್‌ ಮ್ಯೂಸಿಯಂ ಆಫ್‌ ಆರ್ಟ್‌ ಶುಕ್ರವಾರ ಹೇಳಿಕೆ ನೀಡಿದೆ. ಈ ಶಿಲ್ಪಗಳು  1ನೇ ಶತಮಾನದಿಂದ 11ನೇ ಶತಮಾನದ ಅವಧಿಯದ್ದಾಗಿದ್ದು ಅವುಗಳು ಟೆರ್ರಕೊಟ್ಟ, ತಾಮ್ರ ಮತ್ತು ಕಲ್ಲಿನ ಮೂರ್ತಿಗಳಾಗಿವೆ.

ಪ್ರಸ್ತುತ ಭಾರತದಲ್ಲಿ ಜೈಲುಪಾಲಾಗಿರುವ ವಿಗ್ರಹ ಮಾರಾಟಗಾರ ಸುಭಾಶ್‌ ಕಪೂರ್‌ ಈ ಶಿಲ್ಪಗಳನ್ನು ಮಾರಾಟ ಮಾಡಿದ್ದ.

ಈ ವಿಗ್ರಹಗಳ ಕುರಿತು ಮ್ಯಾನ್‌ಹಾಟನ್‌ ಜಿಲ್ಲಾ ಅಟಾರ್ನಿ ಕಚೇರಿಯಿಂದ ದೊರೆತ ಮಾಹಿತಿಯಾನುಸಾರ ಮ್ಯೂಸಿಯಂ ಅವುಗಳನ್ನು ವಾಪಸ್‌ ನೀಡಲು ಮುಂದಾಗಿದೆ.

Similar News