2022-23ರಲ್ಲಿ ಭಾರತದಿಂದ 15,920 ಕೋ.ರೂ.ಮೌಲ್ಯದ ಮಿಲಿಟರಿ ಹಾರ್ಡ್ವೇರ್ ರಫ್ತು: ರಾಜನಾಥ್ ಸಿಂಗ್

Update: 2023-04-01 16:05 GMT

ಹೊಸದಿಲ್ಲಿ,ಎ.1: 2022-23ನೇ ಸಾಲಿನಲ್ಲಿ ಭಾರತವು 15,920 ಕೋ.ರೂ.ಗಳ ರಕ್ಷಣಾ ಉಪಕರಣಗಳನ್ನು ರಫ್ತು ಮಾಡಿದ್ದು,‌ ಇದು ಸಾರ್ವಕಾಲಿಕ ಗರಿಷ್ಠವಾಗಿದೆ ಮತ್ತು ಗಮನಾರ್ಹ ಸಾಧನೆಯಾಗಿದೆ ಎಂದು ರಕ್ಷಣಾ ಸಚಿವ ರಾಜನಾಥ ಸಿಂಗ್ ಶನಿವಾರ ತಿಳಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಯವರ ‘ಸ್ಫೂರ್ತಿದಾಯಕ ನಾಯಕತ್ವ ’ದಡಿ ದೇಶದ ರಕ್ಷಣಾ ರಫ್ತುಗಳು ಗಣನೀಯ ಪ್ರಗತಿಯನ್ನು ಮುಂದುವರಿಸಲಿವೆ ಎಂದೂ ಅವರು ಟ್ವೀಟ್ ನಲ್ಲಿ ಹೇಳಿದ್ದಾರೆ.

ಅಧಿಕೃತ ಅಂಕಿಅಂಶಗಳಂತೆ ಭಾರತವು 2021-22ರಲ್ಲಿ 12,814 ಕೋ.ರೂ.ವೌಲ್ಯದ ರಕ್ಷಣಾ ಉಪಕರಣಗಳನ್ನು ರಫ್ತು ಮಾಡಿತ್ತು. 2020-21,2019-20 ಮತ್ತು 2018-19ರಲ್ಲಿ ಈ ಪ್ರಮಾಣ ಅನುಕ್ರಮವಾಗಿ 8,434 ಕೋ.ರೂ. 9,115 ಕೋ.ರೂ.ಮತ್ತು 10,745 ಕೋ.ರೂ.ಆಗಿತ್ತು. 2017-18ರಲ್ಲಿ 4,682 ಕೋ.ರೂ. ಮತ್ತು 2016-17ರಲ್ಲಿ 1,521 ಕೋ.ರೂ.ವೌಲ್ಯದ ರಕ್ಷಣಾ ಉಪಕರಣಗಳನ್ನು ರಫ್ತು ಮಾಡಲಾಗಿತ್ತು.

2024-25ರಲ್ಲಿ 1,75,000 ಕೋ.ರೂ.ಮೌಲ್ಯದ ರಕ್ಷಣಾ ಹಾಡ್ವೇರ್ ತಯಾರಿಕೆ ಮತ್ತು 35,000 ಕೋ.ರೂ.ವೌಲ್ಯದ ರಫ್ತು ಗುರಿಯನ್ನು ಸರಕಾರವು ಹೊಂದಿದೆ.

Similar News