×
Ad

ಕೆನಡಾ: ಹಿಂದು ದೇವಸ್ಥಾನಕ್ಕೆ ಹಾನಿಗೈದು ಭಾರತ ವಿರೋಧಿ ಘೋಷಣೆಗಳನ್ನು ಬರೆದ ದುಷ್ಕರ್ಮಿಗಳು

Update: 2023-04-06 21:14 IST

ಒಟ್ಟಾವ, ಎ.6: ಕೆನಡಾದ ಒಂಟಾರಿಯೊ ಪ್ರಾಂತದಲ್ಲಿ ಬುಧವಾರ ಹಿಂದು ದೇವಸ್ಥಾನಕ್ಕೆ ಹಾನಿ ಎಸಗಲಾಗಿದ್ದು ಭಾರತ ವಿರೋಧಿ ಘೋಷಣೆಯನ್ನು ದೇವಸ್ಥಾನದ ಗೋಡೆಯಲ್ಲಿ ಬರೆದಿರುವುದಾಗಿ ಪೊಲೀಸರು ಹೇಳಿದ್ದಾರೆ.

ನಾರ್ಥ್ವೇ ಅವೆನ್ಯೂವಿನ 1700 ಬ್ಲಾಕ್ ನಲ್ಲಿರುವ ಹಿಂದು ದೇವಸ್ಥಾನದ ಹೊರಗೋಡೆಯಲ್ಲಿ ಕಪ್ಪು ಬಣ್ಣದಲ್ಲಿ ಭಾರತ ವಿರೋಧಿ ಹೇಳಿಕೆ ಬರೆಯಲಾಗಿದೆ ಎಂದು ವರದಿಯಾಗಿದೆ.

ಪ್ರದೇಶದ ಸಿಸಿಟಿವಿಯ ವೀಡಿಯೊ ಪರಿಶೀಲಿಸಿದಾಗ ಮಧ್ಯರಾತ್ರಿ ಇಬ್ಬರು ಶಂಕಿತರು ದೇವಸ್ಥಾನದ ಬಳಿ ಬಂದಿರುವುದು, ಅದರಲ್ಲಿ ಒಬ್ಬ ದೇವಸ್ಥಾನದೊಳಗೆ ಪ್ರವೇಶಿಸಿ ಗೋಡೆಯ ಮೇಲೆ ಕಪ್ಪುಬಣ್ಣದಿಂದ ಹಿಂದು ವಿರೋಧಿ, ಭಾರತ ವಿರೋಧಿ ಘೋಷಣೆಯನ್ನು ಬರೆಯುತ್ತಿರುವುದು, ಆಗ ಮತ್ತೊಬ್ಬ ಶಂಕಿತ ದೇವಸ್ಥಾನದ ಹೊರಗೆ ನಿಂತು ಕಾವಲು ಕಾಯುತ್ತಿರುವುದು ದಾಖಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಇದನ್ನು ದ್ವೇಷಪ್ರೇರಿತ ಘಟನೆ ಎಂದು ಪರಿಗಣಿಸಿ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

Similar News