×
Ad

ಬ್ರಹ್ಮಾವರ: ಮಗಳಿಗೆ Whatsapp ಸಂದೇಶ ಕಳುಹಿಸಿ ತಾಯಿ ಆತ್ಮಹತ್ಯೆ

Update: 2023-04-08 13:51 IST

ಬ್ರಹ್ಮಾವರ, ಎ.8: ಮಗಳಿಗೆ Whatsapp ಸಂದೇಶ ಕಳುಹಿಸಿ ತಾಯಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಎ.7ರಂದು ಪೂರ್ವಾಹ್ನ 11:30ರ ಸುಮಾರಿಗೆ ಬ್ರಹ್ಮಾವರದ ಚಾಂತಾರು ಎಂಬಲ್ಲಿ ನಡೆದಿದೆ. ಈ ಸಾವಿನ ಬಗ್ಗೆ ಮೃತರ ಸಹೋದರಿ ಸಂಶಯ ವ್ಯಕ್ತಪಡಿಸಿದ್ದು, ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೃತರನ್ನು ಚಾಂತಾರು ನಿವಾಸಿ ಆಶಾಲತಾ(62) ಎಂದು ಗುರುತಿಸಲಾಗಿದೆ. ಆಶಾಲತಾರ ಪತಿ ಮೃತಪಟ್ಟಿದ್ದು, ತನ್ನ ದತ್ತು ಪುತ್ರಿ ಶಮೀಕ್ಷಾಳೊಂದಿಗೆ ವಾಸವಿದ್ದರು. ಶಮೀಕ್ಷಾ ಹಾಗೂ ಆಶಾಲತಾ ಮಧ್ಯೆ ಸಣ್ಣ ಪುಟ್ಟ ವಿಚಾರಕ್ಕೆ ಭಿನ್ನಾಭಿಪ್ರಾಯ ಉಂಟಾಗಿ ಗಲಾಟೆ ಆಗಿತ್ತೆನ್ನಲಾಗಿದೆ. ಈ ನಡುವೆ ಆಶಾಲತಾ  ತನ್ನ ಮಗಳಿಗೆ 'ನಾನು ಸಾಯುತ್ತೇನೆ' ಎಂದು Whatsapp ಮೂಲಕ ಸಂದೇಶ ಕಳುಹಿಸಿ ನಂತರ ಮನೆಯ ಹಾಲ್‌ನ ಫ್ಯಾನಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ದೂರಲಾಗಿದೆ. ಆದರೆ ಅಕ್ಕನ ಮರಣದಲ್ಲಿ ಸಂಶಯವಿರುವುದಾಗಿ ಆಶಾಲತಾರ ಸಹೋದರಿ ಜ್ಯೋತಿ ಪ್ರಭಾ ನೀಡಿದ ದೂರಿನಂತೆ ಪ್ರಕರಣ ದಾಖಲಾಗಿ ತನಿಖೆ ನಡೆಯುತ್ತಿದೆ.

Similar News