ಮಂಗಳೂರು ಜಂಕ್ಷನ್- ಉದ್ನಾ ಜಂಕ್ಷನ್ ನಡುವೆ ಬೇಸಿಗೆಯ ವಿಶೇಷ ಸಾಪ್ತಾಹಿಕ ರೈಲು

Update: 2023-04-08 13:42 GMT

ಉಡುಪಿ, ಎ.8: ಉದ್ನಾ ಜಂಕ್ಷನ್ ಹಾಗೂ ಮಂಗಳೂರು ಜಂಕ್ಷನ್ ನಡುವೆ ಬೇಸಿಗೆಯ ವಿಶೇಷ ಸಾಪ್ತಾಹಿಕ ರೈಲನ್ನು ಓಡಿಸಲು ಕೊಂಕಣ ರೈಲ್ವೆ ನಿರ್ಧರಿಸಿದೆ.

ಪಶ್ಚಿಮ ರೈಲ್ವೆಯ ಸಹಯೋಗದೊಂದಿಗೆ ಬೇಸಿಗೆಯ ಅವಧಿಯಲ್ಲಿ ಜನದಟ್ಟಣೆಯನ್ನು ಕಡಿಮೆ ಮಾಡಲು ವಿಶೇಷ ಟಿಕೆಟ್ ದರ ದಲ್ಲಿ ಈ ರೈಲನ್ನು ಓಡಿಸಲಾಗುತ್ತದೆ ಎಂದು ಕೊಂಕಣ ರೈಲ್ವೆ ಪ್ರಕಟಣೆ ತಿಳಿಸಿದೆ.

ರೈಲು ನಂ.09057 ಉದ್ನಾ ಜಂಕ್ಷನ್- ಮಂಗಳೂರು ಜಂಕ್ಷನ್ ಸಾಪ್ತಾಹಿಕ ವಿಶೇಷ ರೈಲು ವಿಶೇಷ ಟಿಕೆಟ್ ದರದೊಂದಿಗೆ ಎ.12, 19, 26, ಮೇ 3, ಮೇ10, 17, 24, 31 ಹಾಗೂ ಜೂ.7ರ ಪ್ರತಿ ಬುಧವಾರದಂದು ರಾತ್ರಿ 8:00ಗಂಟೆಗೆ ಉದ್ನಾ ಜಂಕ್ಷನ್‌ನಿಂದ ಹೊರಡಲಿದ್ದು, ಮದುದಿನ ಸಂಜೆ 7:40ಕ್ಕೆ ಮಂಗಳೂರು ಜಂಕ್ಷನ್ ತಲುಪಲಿದೆ.

ಅದೇ ರೀತಿ ರೈಲು ನಂ. 09058 ಮಂಗಳೂರು ಜಂಕ್ಷನ್- ಉದ್ನಾ ಜಂಕ್ಷನ್ ಸಾಪ್ತಾಹಿಕ ವಿಶೇಷ ರೈಲು ವಿಶೇಷ ಟಿಕೇಟ್ ದರದೊಂದಿಗೆ ಎ.13, 20, 27, ಮೇ 4, 11, 18, 25, ಜೂ.1 ಹಾಗೂ ಜೂ.8ರ ಗುರುವಾರದಂದು ರಾತ್ರಿ 9:10ಕ್ಕೆ ಮಂಗಳೂರು ಜಂಕ್ಷನ್‌ನಿಂದ ಪ್ರಯಾಣ ಬೆಳೆಸಲಿದ್ದು, ಮರುದಿನ ರಾತ್ರಿ 9:05ಕ್ಕೆ ಉದ್ನಾ ಜಂಕ್ಷನ್ ನಿಲ್ದಾಣ ತಲುಪಲಿದೆ.

ಈ ರೈಲಿಗೆ ವಲ್ಸಾಡ್, ವಾಪಿ, ಪಾಲ್ಘಾರ್, ವಸೈ ರೋಡ್, ಪನ್ವೇಲ್,  ರೋಹಾ, ಖೇಡ್, ಚಿಪ್ಳುಣ್, ಸರ್ವಾಡ, ಸಂಗಮೇಶ್ವರ ರೋಡ್, ರತ್ನಗಿರಿ, ರಾಜಪುರ ರೋಡ್, ವೈಭವಾಡಿ ರೋಡ್, ಕಂಕವಲ್ಲಿ, ಸಿಂಧುದುರ್ಗ, ಕುಡಲ್, ಸಾವಂತವಾಡಿ ರೋಡ್, ತೀವಿಂ, ಕರ್ಮಾಲಿ, ಮಡಗಾಂವ್ ಜಂಕ್ಷನ್, ಕನಕೋನಾ, ಕಾರವಾರ, ಅಂಕೋಲ, ಗೋಕರ್ಣ ರೋಡ್, ಕುಮಟಾ, ಮುರ್ಡೇಶ್ವರ, ಭಟ್ಕಳ, ಮೂಕಾಂಬಿಕಾ ರೋಡ್ ಬೈಂದೂರು, ಕುಂದಾಪುರ, ಉಡುಪಿ, ಮುಲ್ಕಿ ಹಾಗೂ ಸುರತ್ಕಲ್ ನಿಲ್ದಾಣಗಳಲ್ಲಿ ನಿಲುಗಡೆ ಇರುತ್ತದೆ. 

ಅಲ್ಲದೇ ಉದ್ನಾದಿಂದ ಬರುವಾಗ ರೈಲು ಬಿವಂಡಿ ರೋಡ್ ನಿಲ್ದಾಣದಲ್ಲಿ ಹೆಚ್ಚುವರಿ ನಿಲುಗಡೆ ಹೊಂದಿರುತ್ತದೆ. ರೈಲು ಒಟ್ಟು 22 ಎಲ್‌ಬಿಎಚ್ ಕೋಚ್‌ಗಳನ್ನು ಹೊಂದಿರುತ್ತದೆ ಎಂದು ಕೊಂಕಣ ರೈಲ್ವೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಪುಣೆ ಜಂಕ್ಷನ್-ಎರ್ನಾಕುಲಂ ನಡುವೆ ಬೇಸಿಗೆ ರೈಲು: ಇದರೊಂದಿಗೆ  ಪುಣೆ ಜಂಕ್ಷನ್ ಹಾಗೂ ಎರ್ನಾಕುಲಂ ಜಂಕ್ಷನ್ ನಡುವೆ ಸೂಪರ್‌ಫಾಸ್ಟ್ ವಿಶೇಷ ಸಾಪ್ತಾಹಿಕ ರೈಲನ್ನು ಓಡಿಸಲಾಗುತ್ತದೆ. ಎ.13ರಿಂದ ಮೇ 26ರವರೆಗೆ ಸಂಚರಿಸುವ ಈ ರೈಲು ಪ್ರತಿ ಗುರುವಾರ ಸಂಜೆ 6:45ಕ್ಕೆ ಪುಣೆ ಜಂಕ್ಷನ್‌ನಿಂದ ಹೊರಡಲಿದ್ದು, ಮರುದಿನ ಸಂಜೆ 6:50ಕ್ಕೆ ಎರ್ನಾಕುಲಂ ತಲುಪಲಿದೆ.

ಪ್ರತಿ ಶುಕ್ರವಾರ ಮಧ್ಯರಾತ್ರಿ 11:25ಕ್ಕೆ ಎರ್ನಾಕುಲಂನಿಂದ ಹೊರಡುವ  ರೈಲು ಮೂರನೇ ದಿನ ಬೆಳಗಿನ ಜಾವ 2:45ಕ್ಕೆ ಪುಣೆ ನಿಲ್ದಾಣ ತಲುಪಲಿದೆ. ಈ ರೈಲಿಗೆ ಉಳಿದ ನಿಲ್ದಾಣಗಳೊಂದಿಗೆ ಮಡಗಾಂವ್ ಜಂಕ್ಷನ್, ಕಾರವಾರ, ಕುಂದಾಪುರ, ಉಡುಪಿ, ಮಂಗಳೂರು ಜಂಕ್ಷನ್, ಕಾಸರಗೋಡುಗಳಲ್ಲಿ ಸಹ ನಿಲುಗಡೆ ಇರುತ್ತದೆ. ಈ ರೈಲು ಒಟ್ಟು 22 ಕೋಚ್‌ಗಳನ್ನು ಹೊಂದಿರುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Similar News