×
Ad

ರಾಜಸ್ತಾನ: ದಲಿತ ಮಹಿಳೆಯ ಅತ್ಯಾಚಾರಗೈದು ಬೆಂಕಿ ಹಚ್ಚಿ ಕೊಲೆ

Update: 2023-04-08 22:22 IST

ಭೋಪಾಲ್:‌ 30 ವರ್ಷದ ಮಹಿಳೆಯೋರ್ವರನ್ನು ಅತ್ಯಾಚಾರಗೈದು ಬಳಿಕ ಬೆಂಕಿ ಹಚ್ಚಿ ಕೊಂದ ಘಟನೆ ರಾಜಸ್ಥಾನದ ಬಾರ್ಮರ್‌ ಜಿಲ್ಲೆಯಲ್ಲಿ ನಡೆದಿದೆ. ಸುಟ್ಟ ಗಾಯಗಳಿಂದ ಮಹಿಳೆ ಮೃತಪಟ್ಟಿದ್ದಾರೆಂದು ಪೊಲೀಸರು ಮಾಹಿತಿ ನೀಡಿದ್ದಾರೆ. 

ದಲಿತ ಸಮುದಾಯಕ್ಕೆ ಸೇರಿದ ಮಹಿಳೆಗೆ ನಾಲ್ಕು ಮಕ್ಕಳಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಸಕುರ್‌ ಖಾನ್‌ ಎಂಬಾತನನ್ನು ಬಂಧಿಸಲಾಗಿದೆ ಎಂದು ತಿಳಿದು ಬಂದಿದೆ.

ಸಂತ್ರಸ್ತೆಯ ಕುಟುಂಬದವರು ಶುಕ್ರವಾರ ಈ ಪ್ರಕರಣಕ್ಕೆ ಸಂಬಂಧಿಸಿ ದೂರು ನೀಡಿದ್ದಾರೆ ಎಂದು ಬಾರ್ಮರ್‌ನ ಪೊಲೀಸ್ ಅಧೀಕ್ಷಕ ದಿಗಂತ್ ಆನಂದ್ ಶನಿವಾರ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಆರೋಪಿ ಸಕುರ್ ಖಾನ್ ಮಹಿಳೆ ಒಬ್ಬಂಟಿಯಾಗಿರುವಾಗ ಅವಳ ಮನೆಗೆ ಪ್ರವೇಶಿಸಿ ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾನೆ. ಈ ಸಂದರ್ಭದಲ್ಲಿ ಮಹಿಳೆಯ ಮಕ್ಕಳು ಶಾಲೆಗೆ ತೆರಳಿದ್ದರು ಎನ್ನಲಾಗಿದೆ.

ಸಂತ್ರಸ್ತ ಮಹಿಳೆಯು ಕಿರುಚಿದಾಗ ನೆಹೊರೆಯ ಕೆಲವು ಮಂದಿ ಒಟ್ಟು ಸೇರಿದ್ದು. ಈ ಸಂದರ್ಭದಲ್ಲಿ ಆರೋಪಿಯು ದ್ರವವೊಂದನ್ನು ಸುರಿದು ಆಕೆಗೆ ಬೆಂಕಿ ಹಚ್ಚಿದ್ದಾನೆಂದು ಕುಟುಂಬಿಕರು ತಿಳಿಸಿದ್ದಾರೆ. ಕೂಡಲೇ ಮಹಿಳೆಯನ್ನು ಸ್ಥಳೀಯ ಆಸ್ಪತ್ರೆಗೆ ಸಾಗಿಸಲಾಗಿದ್ದು, ಚಿಕಿತ್ಸೆಯ ವೇಳೆ ಆಕೆ ಸಾವನ್ನಪ್ಪಿದ್ದಾಳೆ ಎಂದು ಪೊಲೀಸ್‌ ತಿಳಿಸಿದ್ದಾರೆ. ಸಾವಿಗೂ ಮುನ್ನ ಪೊಲೀಸರು ಆಕೆಯ ಹೇಳಿಕೆಯನ್ನು ದಾಖಲಿಸಿಕೊಂಡಿದ್ದರು.

Similar News