×
Ad

ಕೋಟ: ಕ್ರಿಕೆಟ್ ಬೆಟ್ಟಿಂಗ್; ಐವರ ಬಂಧನ

Update: 2023-04-09 20:55 IST

ಕೋಟ, ಎ.9: ಮೊಬೈಲ್‌ನಲ್ಲಿ ವೆಬ್‌ಸೈಟ್ ಮೂಲಕ ಕ್ರಿಕೆಟ್ ಬೆಟ್ಟಿಂಗ್ ಜೂಜಾಟ ನಡೆಸುತ್ತಿದ್ದ ಐದು ಮಂದಿಯನ್ನು ಕೋಟ ಪೊಲೀಸರು ಸಾಲಿಗ್ರಾಮದಲ್ಲಿ ಎ.8ರಂದು ರಾತ್ರಿ ವೇಳೆ ಬಂಧಿಸಿದ್ದಾರೆ.

ಸಿದ್ಧಾಪುರದ ತೇಜಸ್ ಶೆಟ್ಟಿ (25), ಮರವಂತೆಯ ಕರ್ತವ್ಯ ಶೆಟ್ಟಿ (24), ಕುಂದಾಪುರ ನಾಡದ ಸುದರ್ಶನ ಶೆಟ್ಟಿ (26), ಪವನ್ ಶೆಟ್ಟಿ (25), ಪವನ್ ಕುಮಾರ್ ಶೆಟ್ಟಿ (26) ಬಂಧಿತ ಆರೋಪಿಗಳು.

ಬಂಧಿತರಿಂದ 2 ಕಾರು ಹಾಗೂ 10 ಮೊಬೈಲ್ ಹಾಗೂ 26,000ರೂ. ಹಣವನ್ನು ವಶಪಡಿಸಿಕೊಳ್ಳಲಾಗಿದೆ.  ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Similar News