ರಶ್ಯ ಪ್ರಧಾನಿಯ ಒಪ್ಪಿಗೆಯಿಲ್ಲದೆ ಅಧಿಕಾರಿಗಳು ದೇಶ ತೊರೆಯುವಂತಿಲ್ಲ: ವರದಿ
Update: 2023-04-09 23:03 IST
ಮಾಸ್ಕೊ, ಎ.9: ರಶ್ಯದ ಉನ್ನತ ಅಧಿಕಾರಿಗಳು ದೇಶ ತೊರೆಯಬೇಕಿದ್ದರೆ ಪ್ರಧಾನಿ ಮಿಖಾಯಿಲ್ ಮಿಷುಸ್ಟಿನ್ ನ ಒಪ್ಪಿಗೆ ಪಡೆಯಬೇಕಾಗಿದೆ ಎಂದು ಅಮೆರಿಕ ಮೂಲದ ರಕ್ಷಣಾ ತಜ್ಞರು ಹೇಳಿದ್ದಾರೆ.
ಉನ್ನತ ಅಧಿಕಾರಿಗಳ ಅಂತರಾಷ್ಟ್ರೀಯ ಪ್ರಯಾಣವನ್ನು ರಶ್ಯ ಪ್ರಧಾನಿ ನಿರ್ಬಂಧಿಸಿದ್ದಾರೆ. ಪುಟಿನ್ ಅಧ್ಯಕ್ಷರಾದ ಬಳಿಕ ಇದೇ ಪ್ರಥಮ ಬಾರಿಗೆ ಈ ರೀತಿಯ ನಿರ್ಬಂಧ ಜಾರಿಯಾಗಿದೆ. ರಶ್ಯದ ಅಧಿಕಾರಿಗಳು, ನಿವೃತ್ತ ಅಧಿಕಾರಿಗಳು, ಸರಕಾರಿ ಸ್ವಾಮ್ಯದ ಸಂಸ್ಥೆಗಳ ಕಾರ್ಯನಿರ್ವಹಣಾಧಿಕಾರಿಗಳ ಪಾಸ್ಪೋರ್ಟ್ ಅನ್ನು ರಶ್ಯದ ಭದ್ರತಾ ಇಲಾಖೆ ಮುಟ್ಟುಗೋಲು ಹಾಕಿಕೊಳ್ಳುತ್ತಿದೆ.
ಅಧಿಕಾರಿಗಳು ರಶ್ಯದಿಂದ ಪಲಾಯನ ಮಾಡದಂತೆ ತಡೆಯುವುದು ಇದರ ಉದ್ದೇಶವಾಗಿದೆ ಎಂದು ರಶ್ಯದ `ದಿ ಬೆಲ್' ಸುದ್ಧಿಸಂಸ್ಥೆಯನ್ನು ಉಲ್ಲೇಖಿಸಿ `ದಿ ಇನ್ಸ್ಟಿಟ್ಯೂಟ್ ಫಾರ್ ದಿ ಸ್ಟಡಿ ಆಫ್ ವಾರ್' ವರದಿ ಮಾಡಿದೆ.