×
Ad

ಕಾಸರಗೋಡು: ಹೊಳೆಯಲ್ಲಿ ಮುಳುಗಿ ಇಬ್ಬರು ಮಕ್ಕಳು ಮೃತ್ಯು

Update: 2023-04-11 17:06 IST

ಕಾಸರಗೋಡು: ಹೊಳೆಯಲ್ಲಿ  ಮುಳುಗಿ ಇಬ್ಬರು ಮಕ್ಕಳು ಮೃತಪಟ್ಟ ಘಟನೆ ಅಡೂರಿನಲ್ಲಿ ನಡೆದಿದೆ.

ಅಡೂರು ದೇವರಡ್ಕದ ಶಾಫಿ ಎಂಬವರ ಪುತ್ರ ಮುಹಮ್ಮದ್ ಆಶಿಕ್ (7) ಮತ್ತು ಹಸೈನಾರ್ ಎಂಬವರ ಪುತ್ರ ಮುಹಮ್ಮದ್ ಫಾಸಿಲ್ (9) ಮೃತರು ಎಂದು ಗುರುತಿಸಲಾಗಿದೆ.

ಇಂದು ಮಧ್ಯಾಹ್ನ ಅಡೂರು ದೇವರಡ್ಕದಲ್ಲಿ ಈ ಘಟನೆ ನಡೆದಿದೆ. ಹೊಳೆಗೆ ಸ್ನಾನಕ್ಕಿಳಿದ ಸಂದರ್ಭ ಘಟನೆ ನಡೆದಿದ್ದು, ಮಕ್ಕಳು ಮುಳುಗುತ್ತಿರುವುದನ್ನು ಗಮನಿಸಿದ ಇತರ ಮಕ್ಕಳು ಕೂಡಲೇ ಪರಿಸರ ವಾಸಿಗಳಿಗೆ  ತಿಳಿಸಿದ್ದು, ಧಾವಿಸಿ ಬಂದ ಪರಿಸರ ವಾಸಿಗಳು ಮೇಲಕ್ಕೆತ್ತಿ ಮುಳ್ಳೆರಿಯದ ಆಸ್ಪತ್ರೆಗೆ ತಲುಪಿಸಿದರೂ ಜೀವ ಉಳಿಸಲಾಗಲಿಲ್ಲ  ಎಂದು ತಿಳಿದುಬಂದಿದೆ.

ಈ ಬಗ್ಗೆ ಅಡೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ 

Similar News