ಬಿಹಾರದಲ್ಲಿ ಲಘು ಭೂಕಂಪ

Update: 2023-04-12 02:22 GMT

ಪಾಟ್ನಾ: ಬಿಹಾರದ ಅರಾರಿಯಾ ಸಮೀಪ ಬುಧವಾರ ಮುಂಜಾನೆ 5.35ರ ವೇಳೆಗೆ ಭೂಕಂಪ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ ಭೂಕಂಪದ ತೀವ್ರತೆ 4.3ರಷ್ಟಿತ್ತು ಎಂದು ರಾಷ್ಟ್ರೀಯ ಭೂಕಂಪ ಮಾಪನ ಕೇಂದ್ರ ಪ್ರಕಟಿಸಿದೆ.

ಸುಮಾರು 10 ಕಿಲೋಮೀಟರ್ ಆಳದಲ್ಲಿ ಈ ಭೂಕಂಪ ಸಂಭವಿಸಿದ್ದು, ಇದರ ಕೇಂದ್ರ ಪುರ್ನಿಯಾ ಸಮೀಪ ಇತ್ತು ಎಂದು ಉನ್ನತ ಮೂಲಗಳು ಹೇಳಿವೆ. ಅಮೆರಿಕದ ಜಿಯಾಲಾಜಿಕಲ್ ಸರ್ವೆ, ಈ ಭೂಕಂಪದ ತೀವ್ರತೆಯನ್ನು 4.0 ಎಂದು ಹೇಳಿದೆ.

ನೆರೆಯ ರಾಷ್ಟ್ರಗಳಾದ ಬಾಂಗ್ಲಾದೇಶ ಹಾಗೂ ನೇಪಾಳದಲ್ಲಿ ಕೂಡಾ ಕಂಪನದ ಅನುಭವ ಆಗಿದೆ. ಆದರೆ ಯಾವುದೇ ಆಸ್ತಿಪಾಸ್ತಿ ಅಥವಾ ಜೀವಹಾನಿಯಾದ ಬಗ್ಗೆ ವರದಿಯಾಗಿಲ್ಲ.

ಬುಧವಾರ ನಸುಕಿನಲ್ಲಿ ಸವಿ ನಿದ್ದೆಯಲ್ಲಿದ್ದ ಸಂದರ್ಭ ಉಂಟಾದ ಈ ಕಂಪನದಿಂದ ಎಚ್ಚೆತ್ತುಕೊಂಡು ಭಯಭೀತರಾದ ಹಲವು ಮಂದಿ ತಮ್ಮ ಅನುಭವಗಳನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ.

Similar News