×
Ad

ಸಾವರ್ಕರ್ ಜನ್ಮದಿನವನ್ನು 'ಸ್ವಾತಂತ್ರ್ಯ ವೀರ ಗೌರವ ದಿನ'ವಾಗಿ ಆಚರಣೆ: ಮಹಾರಾಷ್ಟ್ರ ಸಿಎಂ ಶಿಂಧೆ

Update: 2023-04-12 11:40 IST

ಮುಂಬೈ: ಮಹಾರಾಷ್ಟ್ರ ಸರ್ಕಾರವು ವಿ.ಡಿ. ಸಾವರ್ಕರ್ (V D Savarkar) ಅವರ ಜನ್ಮದಿನವನ್ನು "ಸ್ವಾತಂತ್ರ್ಯ ವೀರ ಗೌರವ ದಿನ"ವನ್ನಾಗಿ ಆಚರಿಸಲಿದೆ ಎಂದು ಮಂಗಳವಾರ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ (Maharashtra CM Eknath Shinde) ಪ್ರಕಟಿಸಿದ್ದಾರೆ.

ಈ ಕುರಿತು ಮಾತನಾಡಿದ ಶಿಂಧೆ, ಸಾವರ್ಕರ್ ಅವರ ಕಲ್ಪನೆಗಳನ್ನು ಪ್ರಚುರಪಡಿಸಲು ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು. ಸಾವರ್ಕರ್ ದೇಶದ ಸ್ವಾತಂತ್ರ್ಯ ಹಾಗೂ ಅಭಿವೃದ್ಧಿಗೆ ಅಪಾರ ಕೊಡುಗೆ ನೀಡಿದ್ದಾರೆ ಎಂದು ಹೇಳಿದ್ದು, ಸಾವರ್ಕರ್ ಅವರ ದೇಶಪ್ರೇಮ, ಶೌರ್ಯ ಹಾಗೂ ಪ್ರಗತಿಪರ ಚಿಂತನೆಗಳಿಗೆ ಗೌರವ ಸೂಚಿಸಲು "ಸ್ವಾತಂತ್ರ್ಯ ವೀರ ಗೌರವ ದಿನಾಚರಣೆ"ಯನ್ನು ಆಚರಿಸಲು ಕೈಗಾರಿಕಾ ಸಚಿವ ಉದಯ್ ಸಮಂತ್ ಕರೆ ನೀಡಿದರು ಎಂದೂ ತಿಳಿಸಿದ್ದಾರೆ.

"ಸಾವರ್ಕರ್ ಭಾರತದ ಸ್ವಾತಂತ್ರ್ಯಕ್ಕಾಗಿ ಭಾರಿ ಹೋರಾಟ ನಡೆಸಿದರು. ಅಸ್ಪೃಶ್ಯತೆಯ ವಿರುದ್ಧ ಹೋರಾಡಿದ ಅವರೊಬ್ಬ ಸುಧಾರಣಾವಾದಿ. ದೇಶದ ಪ್ರಗತಿಗಾಗಿ ಯಾವಾಗಲೂ ಹಂಬಲಿಸಿದ ದೇಶಪ್ರೇಮಿ ಅವರಾಗಿದ್ದರು" ಎಂದು ಶಿಂದೆ ಶ್ಲಾಘಿಸಿದ್ದಾರೆ.

ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರಿಗೆ ಪ್ರಸ್ತಾಪ ಸಲ್ಲಿಸಿರುವ ಸಚಿವ ಸಮಂತ್, "ಹೊಸ ತಲೆಮಾರಿನೆದುರು ಭಾರತದ ಸ್ವಾತಂತ್ರ್ಯಕ್ಕಾಗಿ ಸಾವರ್ಕರ್ ನೀಡಿದ ಕೊಡುಗೆಯನ್ನು ತರಬೇಕು. ದೇಶಕ್ಕಾಗಿನ ಸಾವರ್ಕರ್ ಅವರ ಶೌರ್ಯ ಮತ್ತು ಬದ್ಧತೆ ಗಮನಾರ್ಹ. ಅವರೊಬ್ಬ ಅದ್ಭುತ ಪ್ರೇರಣೆ" ಎಂದು ಉಲ್ಲೇಖಿಸಿದ್ದಾರೆ.

ಇದನ್ನೂ ಓದಿ: ಬಟಿಂಡಾ ಮಿಲಿಟರಿ ಸ್ಟೇಷನ್ ನಲ್ಲಿ ಗುಂಡಿನ ದಾಳಿ:  ಕನಿಷ್ಠ ನಾಲ್ವರು ಮೃತ್ಯು

Similar News