×
Ad

ಬಟಿಂಡಾ ಮಿಲಿಟರಿ ಸ್ಟೇಶನ್‌ ದಾಳಿ ಹಿಂದೆ ಸೇನಾ ಸಿಬ್ಬಂದಿ ಕೈವಾಡ ಶಂಕೆ: ಪಂಜಾಬ್‌ ಪೊಲೀಸ್‌ ಮೂಲ

Update: 2023-04-12 11:48 IST

ಹೊಸದಿಲ್ಲಿ: ಬಟಿಂಡಾ ಮಿಲಿಟರಿ ಸ್ಟೇಶನ್ ನೊಳಗೆ   ಬುಧವಾರ ನಡೆದ ಗುಂಡಿನ ದಾಳಿಯಲ್ಲಿ ನಾಲ್ವರು ಸೇನಾ ಸಿಬ್ಬಂದಿ ಮೃತಪಟ್ಟಿದ್ದಾರೆ. ಘಟನೆಯು ಭಯೋತ್ಪಾದಕ ದಾಳಿಯಲ್ಲ ಎಂದು ಪಂಜಾಬ್ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಎಸ್‌ಪಿ) ಹೇಳಿದ್ದಾರೆ.

 ಎರಡು ದಿನಗಳ ಹಿಂದೆ 28 ಕಾರ್ಟ್ರಿಡ್ಜ್‌ಗಳಿರುವ ಒಂದು ಇನ್ಸಾಸ್ ರೈಫಲ್ ನಾಪತ್ತೆಯಾಗಿದ್ದರಿಂದ ಗುಂಡಿನ ದಾಳಿಯ ಹಿಂದೆ ಕೆಲವು ಸೇನಾ ಸಿಬ್ಬಂದಿ ಇರಬಹುದು ಎಂದು ಪಂಜಾಬ್ ಪೊಲೀಸ್ ಮೂಲಗಳು ಇಂಡಿಯಾ ಟುಡೇಗೆ ತಿಳಿಸಿವೆ.

 ಘಟನೆಯ ನಂತರ, ಬಟಿಂಡಾದಲ್ಲಿರುವ ಸೇನಾ ಕಂಟೋನ್ಮೆಂಟ್‌ನ ಎಲ್ಲಾ ಪ್ರವೇಶ ದ್ವಾರಗಳನ್ನು ಮುಚ್ಚಲಾಗಿದೆ. ಶೂಟರ್ ನಾಗರಿಕ ಉಡುಪಿನಲ್ಲಿದ್ದನು.

ಬಟಿಂಡಾ ಮಿಲಿಟರಿ ನಿಲ್ದಾಣದಲ್ಲಿ ನಡೆದ ಗುಂಡಿನ ದಾಳಿಯ ನಂತರ, ಜೀವಹಾನಿಯ ಬಗ್ಗೆ ಮೃತ ಯೋಧರ ಕುಟುಂಬಗಳಿಗೆ ತಿಳಿಸಿದ್ದಾಗಿ ಭಾರತೀಯ ಸೇನೆಯು ಹೇಳಿದೆ.

 ಘಟನೆಯಲ್ಲಿ ನಾಲ್ವರು ಯೋಧರ  ಸಾವನ್ನು ದೃಢಪಡಿಸುವ ಹೇಳಿಕೆಯನ್ನು ಭಾರತೀಯ ಸೇನೆ ಬಿಡುಗಡೆ ಮಾಡಿದ್ದು, ಯಾವುದೇ ಇತರ ಗಾಯಗಳು ಅಥವಾ ಆಸ್ತಿ ನಷ್ಟ ವರದಿಯಾಗಿಲ್ಲ ಎಂದು ಹೇಳಿದೆ.

Similar News