×
Ad

ಮಹೀಂದ್ರಾ ಗ್ರೂಪ್ ನ ಮಾಜಿ ಅಧ್ಯಕ್ಷ ಕೇಶುಬ್ ಮಹೀಂದ್ರಾ ನಿಧನ

Update: 2023-04-12 12:04 IST

ಮುಂಬೈ: ಮಹೀಂದ್ರಾ & ಮಹೀಂದ್ರಾದ ಗೌರವಾನ್ವಿತ ಮಾಜಿ  ಅಧ್ಯಕ್ಷರಾದ ಕೇಶುಬ್ ಮಹೀಂದ್ರಾ ಅವರು ಇಂದು ನಿಧನರಾದರು. ಅವರಿಗೆ 99 ವರ್ಷ ವಯಸ್ಸಾಗಿತ್ತು.

ಮಹೀಂದ್ರಾ ಅವರು 1963 ರಿಂದ 2012 ರವರೆಗೆ ಮಹಿಂದ್ರಾ ಗ್ರೂಪ್ ನ  ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.

 M&M ನ ಮಾಜಿ ವ್ಯವಸ್ಥಾಪಕ ನಿರ್ದೇಶಕ ಪವನ್ ಗೋಯೆಂಕಾ ಅವರು ತಮ್ಮ ವೈಯಕ್ತಿಕ ಟ್ವಿಟರ್ ಹ್ಯಾಂಡಲ್‌ನಲ್ಲಿ ಮಹೀಂದ್ರಾ ಅವರ ಮರಣವನ್ನು ದೃಢಪಡಿಸಿದರು.

ಕಂಪನಿಯ ವಕ್ತಾರರು ಪ್ರತ್ಯೇಕವಾಗಿ ಸುದ್ದಿಯನ್ನು ಖಚಿತಪಡಿಸಿದ್ದಾರೆ.

Similar News