×
Ad

ವಿರೋಧ ಪಕ್ಷಗಳನ್ನು ಒಗ್ಗೂಡಿಸಲು 'ಐತಿಹಾಸಿಕ ಹೆಜ್ಜೆ': ನಿತೀಶ್ ಕುಮಾರ್ ಭೇಟಿ ನಂತರ ರಾಹುಲ್ ಗಾಂಧಿ

Update: 2023-04-12 14:57 IST

 ಹೊಸದಿಲ್ಲಿ: 2024ರ ಸಾರ್ವತ್ರಿಕ ಚುನಾವಣೆಗೆ ಮುನ್ನ ಪ್ರತಿಪಕ್ಷಗಳನ್ನು ಒಟ್ಟುಗೂಡಿಸುವ ಮತ್ತೊಂದು ಪ್ರಯತ್ನದಲ್ಲಿ, ಕಾಂಗ್ರೆಸ್, ಜನತಾ ದಳ (ಸಂಯುಕ್ತ) (ಜೆಡಿಯು) ಹಾಗೂ  ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ನ ಉನ್ನತ ನಾಯಕರು ಇಂದು ದಿಲ್ಲಿಯಲ್ಲಿ ಭೇಟಿಯಾದರು. ಆಡಳಿತಾರೂಢ ಬಿಜೆಪಿ ವಿರುದ್ಧ ಒಗ್ಗಟ್ಟಿನ ಹೋರಾಟ ನಡೆಸುವ ಸಾಧ್ಯತೆಯನ್ನು ತೆರೆದಿಟ್ಟರು.

ಸಭೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಬಿಹಾರ ಮುಖ್ಯಮಂತ್ರಿ ಹಾಗೂ  ಜೆಡಿಯು ನಾಯಕ ನಿತೀಶ್ ಕುಮಾರ್ ಮತ್ತು ಬಿಹಾರದ ಉಪಮುಖ್ಯಮಂತ್ರಿ ಮತ್ತು ಆರ್‌ಜೆಡಿ ಅಧ್ಯಕ್ಷ ತೇಜಸ್ವಿ ಯಾದವ್ ಉಪಸ್ಥಿತರಿದ್ದರು. ಜೆಡಿಯು ಅಧ್ಯಕ್ಷ ರಾಜೀವ್ ರಂಜನ್ ಸಿಂಗ್, ಆರ್‌ಜೆಡಿಯ ರಾಜ್ಯಸಭಾ ಸಂಸದ ಮನೋಜ್ ಕುಮಾರ್ ಝಾ ಹಾಗೂ  ಕಾಂಗ್ರೆಸ್ ನಾಯಕ ಸಲ್ಮಾನ್ ಖುರ್ಷಿದ್ ಕೂಡ ಸಭೆಯಲ್ಲಿ ಉಪಸ್ಥಿತರಿದ್ದರು.

ಸಭೆಯ ನಂತರ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, "ವಿರೋಧ ಪಕ್ಷಗಳನ್ನು ಒಗ್ಗೂಡಿಸಲು "ಐತಿಹಾಸಿಕ ಹೆಜ್ಜೆ" ಇಡಲಾಗಿದೆ. ಇದು ಒಂದು ಪ್ರಕ್ರಿಯೆ, ಇದು ದೇಶದ ಬಗ್ಗೆ ಪ್ರತಿಪಕ್ಷಗಳ ದೃಷ್ಟಿಕೋನವನ್ನು ಅಭಿವೃದ್ಧಿಪಡಿಸುತ್ತದೆ'' ಎಂದು ಹೇಳಿದರು.

Similar News