ಮಂಗಳೂರು ವಿಮಾನ ನಿಲ್ದಾಣಕ್ಕೆ ಅಪೆಕ್ಸ್ ಇಂಡಿಯಾ ಗ್ರೀನ್ ಲೀಫ್ ಪ್ರಶಸ್ತಿ
Update: 2023-04-13 22:07 IST
ಮಂಗಳೂರು, ಎ. 13: ಅಪೆಕ್ಸ್ ಇಂಡಿಯಾ ಫೌಂಡೇಶನ್‌ನಿಂದ 'ಪರಿಸರ ಸುಸ್ಥಿರತೆ'ಗಾಗಿ ಮಂಗಳೂರು ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣವು ಪ್ರತಿಷ್ಠಿತ ʼಅಪೆಕ್ಸ್ ಇಂಡಿಯಾ ಗ್ರೀನ್ ಲೀಫ್ ಅವಾರ್ಡ್ - 2022ʼ ಪಡೆದಿದೆ.
ಗೋವಾದಲ್ಲಿ ಮಂಗಳವಾರ ನಡೆದ ಸಮ್ಮೇಳನದಲ್ಲಿ ಖ್ಯಾತ ನಟಿ ಪೂನಂ ಧಿಲ್ಲೋನ್ ಪ್ರಶಸ್ತಿಯನ್ನು ಪ್ರದಾನ ಮಾಡಿದರು. ಎಎಎಚ್‌ಎಲ್‌ನ ಡಿಜಿಎಂ(ಇಎಚ್‌ಎಸ್) ಅಝರುದ್ದೀನ್ ಕಾಝಿ, ಪರಿಸರ ಅಧಿಕಾರಿ ಕೃತಿ ಜೈನ್ ಮತ್ತು ವಿಮಾನ ನಿಲ್ದಾಣದ ಪರಿಸರ ಅಧಿಕಾರಿ ಶ್ರೀಧರ್ ಮಹಾವರ್ಕರ್ ಪ್ರಶಸ್ತಿಯನ್ನು ಸ್ವೀಕರಿಸಿದರು.
"ಈ ಮನ್ನಣೆಯು ಸುಸ್ಥಿರತೆ ಮತ್ತು ಹಸಿರು ಭವಿಷ್ಯವನ್ನು ನಿರ್ಮಿಸುವ ಸಂಸ್ಥೆಯ ನಿರಂತರ ಪ್ರಯತ್ನಗಳಿಗೆ ಸಾಕ್ಷಿಯಾಗಿದೆ " ಎಂದು ಮಂಗಳೂರು ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣದ ಪ್ರಕಟನೆ ತಿಳಿಸಿದೆ.