×
Ad

ಮಂಗಳೂರು: 1 ಕೆ.ಜಿ.ಗೂ ಅಧಿಕ ಪ್ರಮಾಣದ ಗಾಂಜಾ ವಶ; ಪ್ರಕರಣ ದಾಖಲು

Update: 2023-04-13 22:28 IST

ಮಂಗಳೂರು: ನಗರದ ವೆಲೆನ್ಸಿಯಾ ಸುವರ್ಣ ಲೇನ್ ಬಳಿಯ ಅಪಾರ್ಟ್‌ಮೆಂಟ್‌ವೊಂದರಲ್ಲಿ ವಾಸವಾಗಿರುವ ಸೈಯದ್ ರೋಷನ್ ಎಂಬಾತನಿಂದ ಗುರುವಾರ ಮುಂಜಾನೆ ಸುಮಾರು 1 ಕೆ.ಜಿ ಗಿಂತಲೂ ಅಧಿಕ ಪ್ರಮಾಣದ ಗಾಂಜಾವನ್ನು ಪಾಂಡೇಶ್ವರ ಎಸ್ಸೈ ಶೀತಲ್ ಅಲಗೂರು ವಶಪಡಿಸಿಕೊಂಡಿದ್ದಾರೆ.

ಆರೋಪಿಯು ಈ ಗಾಂಜಾವನ್ನು ಮಾರಾಟ ಮಾಡುತ್ತಿದ್ದ ಎನ್ನಲಾಗಿದೆ. ಈ ಬಗ್ಗೆ ಖಚಿತ ಮಾಹಿತಿ ಪಡೆದ ಎಸ್ಸೈ ದಾಳಿ ನಡೆಸಿ ಪ್ರಕರಣ ದಾಖಲಿಸಲಾಗಿದೆ.

Similar News