×
Ad

ತೊಕ್ಕೊಟ್ಟು: ನಿರ್ಮಾಣ್ ಸಂಸ್ಥೆಯಿಂದ ಅಂಬೇಡ್ಕರ್ ಜಯಂತಿ ಆಚರಣೆ

Update: 2023-04-14 14:40 IST

ಮಂಗಳೂರು, ಎ.14: ಮಹಿಳೆಯರ ಉಚಿತ ಸಾಫ್ಟ್‌ವೇರ್ ತರಬೇತಿ ಹಾಗೂ ಉದ್ಯೋಗ ಸಹಾಯ ಕೇಂದ್ರ ನಿರ್ಮಾಣ್ ಸಂಸ್ಥೆ ತೊಕ್ಕೊಟ್ಟು - ಕಲ್ಲಾಪುವಿನ ತರಬೇತಿ ಭವನದಲ್ಲಿ ಅಂಬೇಡ್ಕರ್ ಜಯಂತಿಯನ್ನು ಆಚರಿಸಲಾಯಿತು. 

ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಸಾಮಾಜಿಕ ಹೋರಾಟಗಾರ್ತಿ ಅಸುಂತಾ ಡಿಸೋಜ 'ಬಾಬಾ ಸಾಹೇಬ ಅಂಬೇಡ್ಕರ್ ಅವರು ಸಾಮಾಜಿಕ ಸಮಾನತೆಗೆ ಹಾಗೂ ಅಸ್ಪೃಶ್ಯ ನಿವಾರಣೆಗಾಗಿ ಹೋರಾಟ ಮಾಡಿದಂತಹ ಧೀಮಂತ ವ್ಯಕ್ತಿಯಾಗಿದ್ದರು' ಎಂದರು.

ಸಂಸ್ಥೆಯ ವ್ಯವಸ್ಥಾಪಕ ಮಂಗಳೂರು ರಿಯಾಜ್ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿದ್ಯಾರ್ಥಿನಿ ಶ್ರೀರಕ್ಷಾ ಸ್ವಾಗತಿಸಿ, ಇಫ್ರಾ ತಬಸುಮ್  ವಂದಿಸಿದರು. ಶಿಫಾ ಕಾರ್ಯಕ್ರಮ‌ ನಿರೂಪಿಸಿದರು. 

Similar News