×
Ad

ಭಾಷಣದ ವೇಳೆ ಸ್ಫೋಟ, ಅಪಾಯದಿಂದ ಪಾರಾದ ಜಪಾನ್ ಪ್ರಧಾನಿ, ದಾಳಿಕೋರನ ಬಂಧನ

Update: 2023-04-15 10:17 IST

ಟೋಕಿಯೊ( ಜಪಾನ್): ಭಾಷಣದ ವೇಳೆ ಸ್ಫೋಟದ ಶಬ್ದ ಕೇಳಿದ ನಂತರ ಜಪಾನ್ ಪ್ರಧಾನಿ ಫ್ಯೂಮಿಯೊ ಕಿಶಿದಾ  ಅವರನ್ನು ವಕಾಯಾಮಾ ಬಂದರಿನಿಂದ  ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದ್ದು, ಘಟನೆಯಲ್ಲಿ ಪ್ರಧಾನಿಗೆ ಏನೂ ಆಗಿಲ್ಲ ಎಂದು ಸ್ಥಳೀಯ ಮಾಧ್ಯಮಗಳು ಶನಿವಾರ ವರದಿ ಮಾಡಿವೆ.

ಕ್ಯೋಡೋ ನ್ಯೂಸ್ ಏಜೆನ್ಸಿ ಸೇರಿದಂತೆ ಹಲವಾರು ವರದಿಗಳ ಪ್ರಕಾರ "ಹೊಗೆ ಬಾಂಬ್" ವೊಂದನ್ನು  ಎಸೆಯಲಾಗಿದೆ. ಆದರೆ ಘಟನಾ ಸ್ಥಳದಲ್ಲಿ ತಕ್ಷಣಕ್ಕೆ  ಗಾಯ ಅಥವಾ ಹಾನಿಯ ಆಗಿರುವ ಕುರಿತು ಯಾವುದೇ ಲಕ್ಷಣಗಳು ಕಂಡುಬಂದಿಲ್ಲ.

ಪಶ್ಚಿಮ ಜಪಾನ್‌ನ ವಕಯಾಮಾದಲ್ಲಿ ಕಿಶಿದಾ ಭಾಷಣ ಮಾಡಲು ಬಂದಿದ್ದ ಸ್ಥಳದಲ್ಲಿ ಒಬ್ಬ ವ್ಯಕ್ತಿಯನ್ನು ಬಂಧಿಸಲಾಯಿತು ಎಂದು ರಾಷ್ಟ್ರೀಯ ಪ್ರಸಾರಕ NHK ತಿಳಿಸಿದೆ.

ಘಟನೆಯ ಬಗ್ಗೆ ತಕ್ಷಣದ ಅಧಿಕೃತ ದೃಢೀಕರಣ ಲಭಿಸಿಲ್ಲ, ಸ್ಥಳೀಯ ಪೊಲೀಸರು ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ

ಜುಲೈ 2022 ರಲ್ಲಿ ಪ್ರಚಾರ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿದ್ದಾಗ  ಗುಂಡು ಹಾರಿಸಿ ಮಾಜಿ ಪ್ರಧಾನಿ ಶಿಂಜೋ ಅಬೆ ಅವರನ್ನು ಹತ್ಯೆಗೈದ  ನಂತರ ಜಪಾನ್ ಭದ್ರತೆಯನ್ನು ಹೆಚ್ಚಿಸಿದೆ.

Similar News