×
Ad

ಎ.19ಕ್ಕೆ ಸುನೀಲ್‌ ಕುಮಾರ್ ನಾಮಪತ್ರ ಸಲ್ಲಿಕೆ

Update: 2023-04-17 19:10 IST

ಕಾರ್ಕಳ, ಎ.17: ರಾಜ್ಯ ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾದ ವಿ. ಸುನೀಲ್ ಕುಮಾರ್ ಅವರು ಎ.19ರ ಬುಧವಾರ ಬೆಳಗ್ಗೆ 10 ಗಂಟೆಗೆ ಕಾರ್ಕಳ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಪರವಾಗಿ ಸ್ಪರ್ಧಿಸಲು ನಾಮಪತ್ರ ಸಲ್ಲಿಸಲಿದ್ದಾರೆ. 

ಈ ಪ್ರಯುಕ್ತ ಸ್ವರಾಜ್ ಮೈದಾನದಿಂದ ಕಾರ್ಕಳ ಬಸ್ಸು ನಿಲ್ದಾಣ- ಬಂಡೀಮಠ ಮಾರ್ಗವಾಗಿ ರ್ಯಾಲಿ ಮುಖಾಂತರ ಸಾಗಿ ಬಂದು ತಾಲೂಕು ಕಚೇರಿಯಲ್ಲಿ ಚುನಾವಣಾಧಿಕಾರಿಯವರಿಗೆ ತಮ್ಮ ನಾಮಪತ್ರ ಸಲ್ಲಿಸಲಿದ್ದಾರೆ. ನಂತರ ಕುಕ್ಕುಂದೂರು ಗ್ರಾಮ ಪಂಚಾಯತ್ ಮೈದಾನದಲ್ಲಿ ಸಾರ್ವಜನಿಕ ಸಭೆ ನಡೆಯಲಿದೆ ಎಂದು ಸುನೀಲ್ ಕುಮಾರ್ ಅವರ ಪ್ರಕಟಣೆ ತಿಳಿಸಿದೆ. 

Similar News