×
Ad

ಉಡುಪಿ: ಚುನಾವಣಾ ವೆಚ್ಚ ವೀಕ್ಷಕರ ಭೇಟಿ

Update: 2023-04-17 20:27 IST

ಉಡುಪಿ, ಎ.17: ವಿಧಾನಸಭಾ  ಸಾರ್ವತ್ರಿಕ ಚುನಾವಣೆಗೆ  ಸಂಬಂದಿಸಿದಂತೆ,  118 ಬೈಂದೂರು ಮತ್ತು 119 ಕುಂದಾಪುರ ವಿಧಾನಸಭಾ ಕ್ಷೇತ್ರದ ವೆಚ್ಚ ವೀಕ್ಷಕರಾದ ಭಾರತೀಯ ಕಂದಾಯ ಸೇವೆಯ ಅಧಿಕಾರಿ  ಮುಕೇಶ್ ತಾರಾಚಂದ್ ತಕ್ವಾನಿ  ಅವರನ್ನು,  ಉಡುಪಿ ಬನ್ನಂಜೆಯಲ್ಲಿರುವ ಪ್ರವಾಸಿ ಮಂದಿರದ ಕೊಠಡಿ ಸಂಖ್ಯೆ ವಿಐಪಿ-ಸಿ1ರಲ್ಲಿ ಹಾಗೂ 120 ಉಡುಪಿ, 121 ಕಾಪು, 122 ಕಾರ್ಕಳ ವಿಧಾನಸಭಾ ಕ್ಷೇತ್ರದ ವೆಚ್ಚ ವೀಕ್ಷಕರಾದ ಭಾರತೀಯ ಕಂದಾಯ ಸೇವೆಯ ಅಧಿಕಾರಿ ಅಂಕಿತ್ ಸೋಮನಿ ಅವರನ್ನು ಬನ್ನಂಜೆಯಲ್ಲಿರುವ ಪ್ರವಾಸಿ ಮಂದಿರದ ಕೊಠಡಿ ಸಂಖ್ಯೆ ವಿಐಪಿ-ಸಿಯಲ್ಲಿ ಬೆಳಗ್ಗೆ  10ರಿಂದ 11ರವರೆಗೆ  ಸಾರ್ವಜನಿಕರು/ಜನಪ್ರತಿನಿಧಿಗಳು ಭೇಟಿ ಮಾಡಿ, ಚುನಾವಣಾ ವೆಚ್ಚಕ್ಕೆ ಸಂಬಂಧಿಸಿದ  ದೂರುಗಳಿದ್ದಲ್ಲಿ ನೀಡಬಹುದು. 

ಮುಕೇಶ್ ತಾರಾಚಂದ್ ತಕ್ವಾನಿ  ಅವರನ್ನು ಮೊ.ಸಂ. 91413 58273, 0820-2003024, ಈಮೇಲ್ - 119kundapuraeo23@gmail.com-ವಿಳಾಸದಲ್ಲಿಹಾಗೂ ಅಂಕಿತ್ ಸೋಮನಿರನ್ನು ಮೊ.ಸಂ. 8762735948, 0820-2003020, ಈಮೇಲ್ - 120udupieo@gmail.com- ವಿಳಾಸದ ಮೂಲಕ ಸಂರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ. 

Similar News