ಮೂಡುಬಿದಿರೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ ಆಸ್ತಿ ಘೋಷಣೆ
ಮಂಗಳೂರು, ಎ.17: ಮೂಡುಬಿದಿರೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ಎಂ. ರೈ ಸಲ್ಲಿಸಿದ ಅಫಿದಾವಿಟ್ ನಲ್ಲಿ 1,44,11,701 ರೂ. ಮೌಲ್ಯದ ಚರಾಸ್ತಿ ಮತ್ತು ಸ್ವಂತ 77,81,030ರೂ. ಮೌಲ್ಯದ ಆಸ್ತಿ ಹೊಂದಿರುವುದಾಗಿ ಮಾಹಿತಿ ನೀಡಿದ್ದಾರೆ.
ಸ್ವಂತ ಆಸ್ತಿಯ ಈಗಿನ ಮಾರುಕಟ್ಟೆ ಮೌಲ್ಯ 1,18,69,000 ರೂ ಮತ್ತು ಇದೇ ವೇಳೆ 1,16,14,098 ರೂ. ಸಾಲ ಹೊಂದಿರುವುದಾಗಿ ಮಾಹಿತಿ ನೀಡಿದ್ದಾರೆ. ಪತ್ನಿ ಶರಣ್ಯಾ ಡಿ ಶೆಟ್ಟಿ ಹೆಸರಲ್ಲಿ 63,27,995 ರೂ. ಮೌಲ್ಯದ ಚರಾಸ್ತಿ ಇದೆ.
ಮಿಥುನ್ ರೈ 17.74 ಲಕ್ಷ ರೂ ಮೌಲ್ಯದ 320 ಗ್ರಾಂ ಚಿನ್ನ, 64,600 ರೂ. ಮೌಲ್ಯದ 800 ಗ್ರಾಂ ಬೆಳ್ಳಿ ಹೊಂದಿದ್ದಾರೆ. ಪತ್ನಿ ಶರಣ್ಯಾ ಡಿ ಶೆಟ್ಟಿ 560 ಗ್ರಾಂ ಚಿನ್ನ ಮೌಲ್ಯ 31,04,500.00 ರೂ . ಬೆಳ್ಳಿ 3025 ಗ್ರಾಂ (2.45 ಲಕ್ಷ ರೂ), ವಜ್ರಾಭರಣ 28 ಲಕ್ಷ ರೂ. ಒಟ್ಟು ಮೌಲ್ಯ 61,46,500 ರೂ. ಮೌಲ್ಯದ ಆಸ್ತಿ ಹೊಂದಿದ್ದಾರೆ.
2018, ಆ.9ರಂದು ಕ್ವಿಟ್ ಇಂಡಿಯಾ ದಿನಾಚರಣೆ ವೇಳೆ ಪುರಭವನದ ಬಳಿ ಹಲ್ಲೆ ಪ್ರಕರಣದ ಆರೋಪ ಮತ್ತು ಕರ್ನಾಟಕದ ಮುಖ್ಯಮಂತ್ರಿ ಅವರಿಗೆ 2022, ಎ.12ರಂದು ನಗರದ ಹೋಟೆಲ್ ಬಳಿ ಕಪ್ಪು ಬಾವುಟ ಪ್ರದರ್ಶನ ಪ್ರಕರಣ ವಿಚಾರಣೆಗೆ ಬಾಕಿ ಇದೆ.
ಮಿಥುನ್ ರೈ ಬಳಿ 4,98,609ರೂ. ಮೌಲ್ಯದ ಹುಂಡೈ ಎಲೈಟ್ ಐ20 ಎರಾ ಮತ್ತು 19,82,311 ರೂ. ಮೌಲ್ಯದ ಟೊಯೊಟಾ ಇನೊವಾ ಕ್ರಿಸ್ಟಾ ಕಾರು ಇದೆ.