ಕಾರ್ಕಳ: ಜೆಡಿಎಸ್ ಅಭ್ಯರ್ಥಿ ಶ್ರಿಕಾಂತ್ ಪೂಜಾರಿ ಕುಚ್ಚೂರು ನಾಮಪತ್ರ ಸಲ್ಲಿಕೆ
Update: 2023-04-18 12:53 IST
ಕಾರ್ಕಳ, ಎ.18: ಕಾರ್ಕಳ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿ ಶ್ರೀಕಾಂತ್ ಪೂಜಾರಿ ಕುಚ್ಚೂರು ಇಂದು ನಾಮಪತ್ರ ಸಲ್ಲಿಸಿದರು.
ಶ್ರೀಕಾಂತ್ ಪೂಜಾರಿ ಅವರು ಕಾರ್ಕಳದ ತಾಲೂಕು ಕಚೇರಿಯಲ್ಲಿ ಚುನಾವಣಾಧಿಕಾರಿ ಮದನ್ ಮೋಹನ್ ಅವರಿಗೆ ನಾಮಪತ್ರ ಸಲ್ಲಿಸಿದರು
ಈ ವೇಳೆ ಪಕ್ಷದ ಜಿಲ್ಲಾಧ್ಯಕ್ಷ ಯೋಗೇಶ್ ಶೆಟ್ಟಿ, ಕಾರ್ಯಾಧ್ಯಕ್ಷ ವಾಸುದೇವ ರಾವ್, ಕಾಪು ಬ್ಲಾಕ್ ಅಧ್ಯಕ್ಷ ಭರತ್ ಶೆಟ್ಟಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಯರಾಂ ಆಚಾರ್ಯ, ಕಾರ್ಕಳದ ಸುರೇಶ್ ದೇವಾಡಿಗ, ಸೈಯದ್ ಹರ್ಷದ್, ಹರೀಶ್ ಮುದ್ರಾಡಿ, ನಝೀರ್, ಅಶ್ಫಾಕ್, ಶಂಕರ್ ಮೊದಲಾದವರು ಉಪಸ್ಥಿತರಿದ್ದರು.