ಬೈಂದೂರು ಜೆಡಿಎಸ್ ಅಭ್ಯರ್ಥಿ ಮನ್ಸೂರು ನಾಮಪತ್ರ ಸಲ್ಲಿಕೆ
Update: 2023-04-19 17:00 IST
ಬೈಂದೂರು: ಬೈಂದೂರು ವಿಧಾನಸಭಾ ಕ್ಷೇತ್ರದ ಜೆಡಿಎಸ್ ಪಕ್ಷದ ಅಭ್ಯರ್ಥಿ ಮನ್ಸೂರ್ ಇಬ್ರಾಹಿಂ ಬುಧವಾರ ಬೈಂದೂರಿನ ಚುನಾವಣಾಧಿಕಾರಿ ಗಳ ಕಛೇರಿಯಲ್ಲಿ ನಾಮಪತ್ರ ಸಲ್ಲಿಸಿದರು.
ಚುನಾವಣಾಧಿಕಾರಿ ಜಗದೀಶ ಗಂಗಣ್ಣನವರ್ ನಾಮಪತ್ರ ಸ್ವೀಕರಿಸಿದರು. ಸಹಾಯಕ ಚುನಾವಣಾಧಿಕಾರಿ ಪ್ರಭುಸ್ವಾಮಿ ವಿ.ಎಂ. ಹಾಜರಿದ್ದರು.
ಈ ಸಂದರ್ಭದಲ್ಲಿ ಜೆಡಿಎಸ್ ಪಕ್ಷದ ಮುಖಂಡರಾದ ಶ್ರೀಕಾಂತ್ ಅಡಿಗ, ಸಂದೇಶ್ ಭಟ್, ಜಯಶೀಲ ಶೆಟ್ಟಿ, ಮಕ್ಡ್ಯಾಮ್ ಇಸ್ಮಾಯಿಲ್, ರಿಯಾಜ್ ನಾವುಂದ, ಗಿರೀಶ್ ಮೊದಲಾದವರು ಉಪಸ್ಥಿತರಿದ್ದರು.