ಉಡುಪಿ: ಟ್ರೇಂಡಿಂಗ್ ವ್ಯವಹಾರ ಹೆಸರಿನಲ್ಲಿ ಲಕ್ಷಾಂತರ ರೂ. ವಂಚನೆ
Update: 2023-04-19 19:18 IST
ಉಡುಪಿ, ಎ.19: ಟೆಲಿಗ್ರಾಂ ಆ್ಯಪ್‌ನಲ್ಲಿ ಟ್ರೇಂಡಿಂಗ್ ವ್ಯವಹಾರ ಎಂದು ನಂಬಿಸಿ ಲಕ್ಷಾಂತರ ರೂ. ಹಣವನ್ನು ಆನ್‌ಲೈನ್ ಮೂಲಕ ಪಡೆದು ಮೋಸ ಮಾಡಿರುವ ಬಗ್ಗೆ ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೊಟೇಲ್ ಉದ್ಯೋಗಿಯಾಗಿರುವ ಸಂದೀಪ್ ಕುಮಾರ್(32) ಎಂಬವರಿಗೆ ಟೆಲಿಗ್ರಾಮ್ ಆ್ಯಪ್‌ನಲ್ಲಿ ಟ್ರೇಡಿಂಗ್ ವ್ಯವಹಾರದ ಬಗ್ಗೆ ಅಂಬ್ಲಿನ್ ಎಂಟರ್ಟೈನ್‌ಮೆಂಟ್ ಎಂಬ ಸಂಸ್ಥೆಯು ಲಿಂಕ್ ಕಳುಹಿಸಿ ಅದಕ್ಕೆ ಹಣವನ್ನು ಡಿಪಾಸಿಟ್ ಮಾಡುವಂತೆ ತಿಳಿಸಿತ್ತು. ಅದರಂತೆ ಹಣ ಹಾಕಿ ಇವರಿಗೆ ಹಣ ರಿಟರ್ನ್ ಬಂದಿತ್ತು.
ಇದನ್ನು ನಂಬಿದ ಸಂದೀಪ್, ತನ್ನ ಬ್ಯಾಂಕ್ ಖಾತೆಯಿಂದ ಎ.7ರಿಂದ ಎ.13ರ ಮಧ್ಯಾವಧಿಯಲ್ಲಿ ಒಟ್ಟು 4,20,341ರೂ. ಹಣವನ್ನು ಆರೋಪಿ ಸೂಚಿಸಿದ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಿದ್ದರು. ಆದರೆ ಆ ಹಣ ವಾಪಾಸ್ಸು ನೀಡದೆ ಸಂದೀಪ್‌ಗೆ ವಂಚಿಸಿರುವುದಾಗಿ ದೂರಲಾಗಿದೆ.