×
Ad

ಟಿಪ್ಪರ್ ಚಾಲಕ ಆತ್ಮಹತ್ಯೆ

Update: 2023-04-20 22:06 IST

ಬೈಂದೂರು, ಎ.20: ವೈಯಕ್ತಿಕ ಕಾರಣದಿಂದ ಮನನೊಂದು ಟಿಪ್ಪರ್ ಚಾಲಕನೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ಅಲಂದೂರು ಮುರಕೋಡಿ ಎಂಬಲ್ಲಿ ನಡೆದಿದೆ.

ಮೃತರನ್ನು ಶಾಂತರಾಮ ಕೊಠಾರಿ ಎಂದು ಗುರುತಿಸಲಾಗಿದೆ.

ಟಿಪ್ಪರ್ ಚಾಲಕನಾಗಿ ಕೆಲಸ ಮಾಡಿಕೊಂಡಿದ್ದ ಇವರು ಎ.17ರಂದು ಮನೆಯಿಂದ ಬೈಕಿನಲ್ಲಿ ಹೋದವರು ನಾಪತ್ತೆ ಯಾಗಿದ್ದರು. ಎ.19ರಂದು ಬೆಳಗ್ಗೆ ಮುರಕೋಡಿ ಯಲ್ಲಿ ಬೈಕ್ ಪತ್ತೆಯಾದ ಹಿನ್ನೆಲೆಯಲ್ಲಿ ಸುತ್ತಮುತ್ತ ಹುಡುಕಿದಾಗ ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡುಬಂದಿದೆ.

ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Similar News