×
Ad

ಭಟ್ಕಳ: ಮಹಿಳೆಯರೊಂದಿಗೆ ಅಸಭ್ಯವಾಗಿ ವರ್ತಿಸಿದ ಆರೋಪ; ಇಬ್ಬರ ಬಂಧನ

Update: 2023-04-21 22:37 IST

ಭಟ್ಕಳ: ರಂಝಾನ್ ಪೇಟೆಯಲ್ಲಿ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ ಆರೋದಡಿ ಇಬ್ಬರು ಯುವಕರನ್ನು ಪೊಲೀಸರು ಬಂಧಿಸಿರುವ ಘಟನೆ ಗುರುವಾರ ತಡರಾತ್ರಿ  ನಡೆದಿದ್ದು, ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದ ಆರೋಪದಡಿ 5 ಜನರನ್ನು ವಶಕ್ಕೆ ಪಡಿಸಿಕೊಂಡಿದ್ದಾಗಿ ತಿಳಿದುಬಂದಿದೆ.

ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ ಯುವಕರನ್ನು ಹದ್ಲೂರು ನಿವಾಸಿ ಚಂದ್ರು ಸೋಮಯ್ಯಗೊಂಡ ಹಾಗೂ ಸರ್ಪನಕಟ್ಟೆಯ ರವೀಂದರ ಶಂಕರ್ ನಾಯ್ಕ ಎಂದು ಗುರುತಿಸಲಾಗಿದೆ. ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಪಡಿಸಿದವರನ್ನು ಆಟೋ ಚಾಲಕ ಸುಲ್ತಾನ್ ಸ್ಟ್ರೀಟ್ ನಿವಾಸಿ ಮುಹಮ್ಮದ್ ಮೀರಾನ್ (28) ಗುಲ್ಮಿ ನಿವಾಸಿ ಇಸ್ಮಾಯಿಲ್ ನೂರಾನಿ (26), ಸೈಯದ್ ಸಲೀಂ (31), ಮುಹಮ್ಮದ್ ಫೈಝಾನ್ (20) ಮತ್ತು ಮುಹಮ್ಮದ್ ಸದ್ದಾಂ (24) ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆಯ ನಂತರ ಭಟ್ಕಳದಲ್ಲಿ ಪರಿಸ್ಥಿತಿ ಸಂಪೂರ್ಣ ಶಾಂತಿಯುತವಾಗಿದ್ದು, ಹೆಚ್ಚಿನ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ರಂಝಾನ್‌ ಜಝಾರ್‌ ನಲ್ಲಿ ಅಂಗಡಿಗಳು ಮತ್ತು ಸ್ಟಾಲ್‍ಗಳು ಎಂದಿನಂತೆ ತೆರೆದಿದ್ದು, ರಂಝಾನ್‌ ಬಝಾರ್‌ ನಲ್ಲಿ ಜನಸಂದಣಿ ಕಂಡುಬಂದಿದೆ. ತಂಝೀಮ್ ಸಂಸ್ಥೆಯ ಪದಾಧಿಕಾರಿಗಳು ಯಾವುದೇ ವದಂತಿಗಳಿಗೆ ಗಮನ ಕೊಡದಂತೆ  ಸಾರ್ವಜನಿಕರಲ್ಲಿ ಮನವಿ ಮಾಡಿದ್ದು, ಭಟ್ಕಳ ರಂಝಾನ್‌ ಜಝಾರ್‌ ನಲ್ಲಿ ಈದ್ ಶಾಪಿಂಗ್‍ಗೆ ಬರಬಹುದು ಎಂದು ತಿಳಿಸಿದ್ದಾರೆ. ಇಲ್ಲಿ ಪರಿಸ್ಥಿತಿ ಸಹಜ ಸ್ಥಿತಿಗೆ ಮರಳಿದೆ. ಈ ನಿಟ್ಟಿನಲ್ಲಿ ಸಂಸ್ಥೆಯ ಪದಾಧಿಕಾರಿಗಳು ಸ್ಥಳೀಯ ಪೊಲೀಸ್ ಉನ್ನತಾಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

Similar News