×
Ad

ಮಸೀದಿಯಲ್ಲಿ ಹಿಂದೂ ಮಹಿಳೆ ದಾಂಧಲೆ ಎಬ್ಬಿಸಿದರೇ?: ಇಲ್ಲಿದೆ ವಾಸ್ತವಾಂಶ

Update: 2023-04-23 12:45 IST

ವಾಷಿಂಗ್ಟನ್:‌ ಭಾರತೀಯ ಮೂಲದ ಹಿಂದೂ ಮಹಿಳೆಯೊಬ್ಬಳು ಅಮೆರಿಕಾದ ಮಸೀದಿಯೊಂದರಲ್ಲಿ ಈದ್‌ ಪ್ರಾರ್ಥನೆ ನಡೆಸುವಾಗ ದಾಂಧಲೆ ಸೃಷ್ಟಿಸಿದ್ದಾರೆ ಎಂದು ವಿಡಿಯೋ ಒಂದು ವೈರಲ್‌ ಆಗುತ್ತಿದೆ. ಇದೇ ವಿಡಿಯೋದ ಆಧಾರದ ಮೇಲೆ ಹಲವು ವೆಬ್‌ ತಾಣಗಳು ಹಿಂದೂ ಮಹಿಳೆ ಮಸೀದಿಯಲ್ಲಿ ಗದ್ದಲ ಸೃಷ್ಟಿಸಿದ್ದಾರೆ ಎಂದು ವರದಿ ಮಾಡಿವೆ.

ಘಟನೆ ಅಮೆರಿಕಾ ಸಂಸ್ಥಾನದ ವರ್ಜೀನಿಯಾದಲ್ಲಿರುವ ಆಡಮ್ಸ್‌ ಸೆಂಟರ್‌ನಲ್ಲಿ ನಡೆದಿದೆ. ಈದ್‌ ನಮಾಝಿನ ವೇಳೆ ಪ್ರವಚನ ನೀಡುವ ಸ್ಥಳದ  ಮೇಲೆ ಏಕಾಏಕಿ ಹತ್ತಿದ ಮಹಿಳೆ ಇಸ್ಲಾಮಿಕ್ ವಿರೋಧಿ ಘೋಷಣೆಗಳನ್ನು ಕೂಗಿದ್ದಾಳೆ. ನಮಾಝಿಗರು ಒಂದು ಕ್ಷಣ ವಿಚಲಿರಾಗಿದ್ದಾರೆ ಎಂಬ ಸಂದೇಶದೊಂದಿಗೆ ವಿಡಿಯೋ ವೈರಲ್ ಆಗಿತ್ತು 

ವಾಸ್ತವಾಂಶವೇನು?

ಮಸೀದಿಯಲ್ಲಿ ಹಿಂದೂ ಮಹಿಳೆ ದಾಂಧಲೆ ನಡೆಸಿದ್ದಾರೆ ಎಂದು ಹಲವಾರು ಸಾಮಾಜಿಕ ಜಾಲತಾಣ ಬಳಕೆದಾರರು ಪ್ರತಿಪಾದಿಸಿದ್ದರು. ಆದರೆ ವಾಸ್ತವದಲ್ಲಿ ಆಕೆ ಹಿಂದೂ ಮಹಿಳೆ ಅಲ್ಲ, ಮುಸ್ಲಿಮ್‌ ಸಮುದಾಯಕ್ಕೆ ಸೇರಿದ ಮಹಿಳೆ ಎಂದು ಮಸೀದಿ ಆಡಳಿತ ಮಂಡಳಿ ತಿಳಿಸಿದೆ. ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿರುವ ಮಹಿಳೆಯಾಗಿದ್ದು, ಮಹಿಳೆಯ ವಿಡಿಯೋವನ್ನು ತಪ್ಪಾಗಿ ಬಳಸದಂತೆ ಮಂಡಳಿಯು ಕೋರಿಕೊಂಡಿದೆ. 

ಈ ಕುರಿತು ತನ್ನ ಅಧಿಕೃತ ಫೇಸ್‌ಬುಕ್‌ ಪೇಜ್‌ನಲ್ಲಿ ಪೋಸ್ಟ್‌ ಹಾಕಿರುವ ಆಡಮ್ಸ್‌ ಮಂಡಳಿ, “ವರ್ಜೀನಿಯಾದ ADAMS ಮಸೀದಿಯಲ್ಲಿ, ಈದ್ ಪ್ರಾರ್ಥನೆಯ ಸಮಯದಲ್ಲಿ ಶುಕ್ರವಾರ, ಎ. 21 ರಂದು ನಡೆದ ಇತ್ತೀಚಿನ ಘಟನೆಯು ಮಾನಸಿಕ ಆರೋಗ್ಯ ಸಮಸ್ಯೆಗಳೊಂದಿಗೆ ಹೋರಾಡುತ್ತಿರುವ ಮುಸ್ಲಿಂ ಸಮುದಾಯದ ಮಹಿಳೆಯಿಂದ ನಡೆದಿದೆ” ಎಂದು ಆಡಳಿತ ಮಂಡಳಿ ಸ್ಪಷ್ಟನೆ ನೀಡಿದೆ. 

ಹೆಚ್ಚುವರಿ ಸಹಾಯವನ್ನು ಒದಗಿಸಲು ADAMS ಮಂಡಳಿಯು ಮಹಿಳೆಯ ಕುಟುಂಬವನನು ಭೇಟಿಯಾಗಿ ಕಾರ್ಯನಿರ್ವಹಿಸುತ್ತಿವೆ. ಈದ್ ಪ್ರಾರ್ಥನೆಯ ಸಮಯದಲ್ಲಿ ಬೆಳಿಗ್ಗೆ ನಡೆದ ಘಟನೆಗಾಗಿ ಕುಟುಂಬವು ಪ್ರಾಮಾಣಿಕವಾಗಿ ಕ್ಷಮೆ ಕೇಳಿದೆ. ಕುಟುಂಬದ ಗೌಪ್ಯತೆಯನ್ನು ಕಾಪಾಡಲು ವಿಡಿಯೋವನ್ನು ಸಾಮಾಜಿಕ ಮಾಧ್ಯಮದಿಂದ ತೆಗೆದುಹಾಕುವಂತೆ ಕುಟುಂಬವು ವಿನಂತಿಸಿದೆ ಎಂದು ಮಂಡಳಿಯು ಹೇಳಿದೆ.

Full View

Similar News