ಕಾಂಗ್ರೆಸ್ ಪಕ್ಷಕ್ಕೆ ಸೇರಿದ ಸರ್ವರನ್ನು ಸಮಾನತೆ, ಗೌರವದಿಂದ ಕಾಣಲಾಗುವುದು: ಯು.ಟಿ.ಖಾದರ್
ಉಳ್ಳಾಲ : ಕಾಂಗ್ರೆಸ್ ಪಕ್ಷ ಸಿದ್ಧಾಂತವನ್ನು ಒಪ್ಪಿಕೊಂಡು ಬಿಜೆಪಿ ಸೇರಿದಂತೆ ವಿವಿಧ ಪಕ್ಷಗಳಿಂದ ಮುಖಂಡರು, ಕಾರ್ಯಕರ್ತರು ಕಾಂಗ್ರೆಸ್‍ಗೆ ಸೇರ್ಪಡೆಯಾಗುತ್ತಿದ್ದು, ಪಕ್ಷಕ್ಕೆ ಸೇರಿದ ಸರ್ವರನ್ನು ಸಮಾನತೆ ಮತ್ತು ಗೌರವದಿಂದ ಕಾಣಲಾಗುವುದು ಎಂದು ಮಂಗಳೂರು ವಿಧಾನಸಭಾ ಕ್ಷೇತ್ರದ ಶಾಸಕ ಯು.ಟಿ.ಖಾದರ್ ಅಭಿಪ್ರಾಯಪಟ್ಟರು.
ಅವರು ಕೋಟೆಕಾರು ಪಟ್ಟಣ ಪಂಚಾಯತ್ ವ್ಯಾಪ್ತಿಯ ಬೀರಿ, ಕೋಟೆಕಾರು, ಉಳ್ಳಾಲ ನಗರಸಭಾ ವ್ಯಾಪ್ತಿಯ ಮುಕ್ಕಚ್ಚೇರಿ, ಕೋಟೆಪುರ, ತೊಕ್ಕೊಟ್ಟು, ಪೆರ್ಮನ್ನೂರು, ಚೇಳೂರು ವ್ಯಾಪ್ತಿಯ ಕೋಟೆಕಣಿ, ಮೇರೆಮಜಲು ಗ್ರಾಮ, ನರಿಂಗಾನ ಗ್ರಾಮದ ವಿದ್ಯಾನಗರ, ಸೋಮೇಶ್ವರ ಪುರಸಭೆ ವ್ಯಾಪ್ತಿಯ ಮುಂಡೋಳಿ, ಮುನ್ನೂರು ಗ್ರಾಮದ ಪಂಜಂದಾಯ ದೈವಸ್ಥಾನ ವ್ಯಾಪ್ತಿಯಲ್ಲಿ ಮತಯಾಚನೆ ಮಾಡಿ, ಮಾತನಾಡಿದರು.
ಮಂಗಳೂರು ವಿಧಾನಸಬಾ ಕ್ಷೇತ್ರ ವ್ಯಾಪ್ತಿಯಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ನಗರ ಪ್ರದೇಶದ ಸವಲತ್ತನ್ನು ಕೊಡುವಲ್ಲಿ ಮೂಲಭೂತ ಸೌಕರ್ಯ ಅಭಿವೃದ್ಧಿ ಮಾಡಿದ್ದು, ಕುಡಿಯುವ ನೀರಿನ ಯೋಜನೆ ಮಹತ್ವದ ಕಾಮಗಾರಿ ಪೂರ್ಣಗೊಂಡಿದ್ದು, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಕೆಲವೇ ತಿಂಗಳುಗಳಲ್ಲಿ ಈ ಯೋಜನೆಯನ್ನು ಪೂರ್ಣ ಗೊಳಿಸುವ ಯೋಜನೆಯನ್ನು ಹಾಕಿಕೊಂಡಿದ್ದು, ಇದರೊಂದಿಗೆ ಉಳಿದಿರುವ ಮೂಲಭೂತ ಸೌಕರ್ಯವನ್ನು ಆಭಿವೃದ್ಧಿ ಪಡಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಸಜಿಪಪಡುವಿನಲ್ಲಿ ನಟ್ಟಿಲು ಪ್ರದೇಶದಲ್ಲಿ ಬಿಜೆಪಿ ಬೂತ್ ಅಧ್ಯಕ್ಷ ಸೇರಿದಂತೆ ಸುಮಾರು 25 ಕಾರ್ಯಕರ್ತರು ಕಾಂಗ್ರೆಸ್ ಸೇರ್ಪಡೆಗೊಂಡರು. ಮುಡಿಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಶಾಂತ್ ಕಾಜವ, ಜಿಲ್ಲಾ ಪಂಚಾಯತ್ ಸದಸ್ಯೆ ಮಮತಾಡಿ. ಎಸ್. ಗಟ್ಟಿ, ತಾ. ಪಂ. ಮಾಜಿ ಸದಸ್ಯರಾದ ಪ್ರವೀಣ್ ಆಳ್ವ, ಸವಿತಾ ಕರ್ಕೇರ, ಜಬ್ಬಾರ್ ಬೋಳಿಯಾರ್, ಪಂಚಾಯತ್ ಮಾಜಿ ಅಧ್ಯಕ್ಷರಾದ ಝಬೇರ್ ತಲೆಮೊಗರು, ಎಸ್.ಕೆ. ಕುಂಇಮೋನು, ಬಶೀರ್ ಕೋಟೆಕಣಿ, ಹಾರಿಷ್, ಲತೀಫ್ ಬೋಳಮೆ ಮತ್ತಿತರರು ಉಪಸ್ಥಿತರಿದ್ದರು.