×
Ad

ಯುಎಇಯ ಶಾರ್ಜಾ ಕ್ರಿಕೆಟ್ ಸ್ಟೇಡಿಯಂ ಸ್ಟ್ಯಾಂಡ್ ಗೆ ಸಚಿನ್ ತೆಂಡುಲ್ಕರ್ ಹೆಸರು

Update: 2023-04-25 10:55 IST

ದುಬೈ: 50 ನೇ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಭಾರತದ ಬ್ಯಾಟಿಂಗ್ ದಿಗ್ಗಜ ಸಚಿನ್ ತೆಂಡುಲ್ಕರ್ ಅವರ  ಹೆಸರನ್ನು ಶಾರ್ಜಾ ಕ್ರಿಕೆಟ್ ಸ್ಟೇಡಿಯಮ್ ನ ಸ್ಟ್ಯಾಂಡ್ ವೊಂದಕ್ಕೆ ನೀಡುವ ಮೂಲಕ ಗೌರವಿಸಲಾಗಿದೆ.

ಭಾರತದ ಮಾಜಿ ನಾಯಕನಿಗಾಗಿ ಸೋಮವಾರ  ಸಮಾರಂಭವನ್ನು ಆಯೋಜಿಸಲಾಗಿದ್ದು, 'ವೆಸ್ಟ್ ಸ್ಟ್ಯಾಂಡ್' ಅನ್ನು 'ಸಚಿನ್ ತೆಂಡುಲ್ಕರ್ ಸ್ಟ್ಯಾಂಡ್' ಎಂದು ಮರುನಾಮಕರಣ ಮಾಡಲಾಗಿದೆ ಎಂದು ಘೋಷಿಸಲಾಯಿತು.

ಆಸ್ಟ್ರೇಲಿಯದ ಸಿಡ್ನಿ ಕ್ರಿಕೆಟ್ ಮೈದಾನವು ಸೋಮವಾರ ತೆಂಡುಲ್ಕರ್ ಅವರಿಗೆ ಗೌರವ ಸಲ್ಲಿಸಿತು. ಸಚಿನ್ ಹಾಗೂ  ವೆಸ್ಟ್ ಇಂಡೀಸ್ ಬ್ಯಾಟ್ಸ್‌ಮನ್ ಬ್ರಿಯಾನ್ ಲಾರಾ ಅವರ ಹೆಸರಿನ ಗೇಟ್‌ಗಳನ್ನು ಅನಾವರಣಗೊಳಿಸಿತು.

Similar News