ಕೇರಳ: ಮೊಬೈಲ್ ಫೋನ್ ಸ್ಫೋಟಗೊಂಡು ಎಂಟು ವರ್ಷದ ಬಾಲಕಿ ಮೃತ್ಯು
Update: 2023-04-25 13:09 IST
ತ್ರಿಶೂರ್: ತಾನು ಬಳಸುತ್ತಿದ್ದ ಮೊಬೈಲ್ ಫೋನ್ ಸ್ಫೋಟಗೊಂಡ ಪರಿಣಾಮ ಎಂಟು ವರ್ಷದ ಬಾಲಕಿ ಮೃತಪಟ್ಟ ಕೇರಳದಲ್ಲಿ ನಡೆದಿದೆ.
ತಿರುವಿಲ್ವಮಲ ನಿವಾಸಿಯಾದ ಆದಿತ್ಯಶ್ರೀ ಎಂಬ ಬಾಲಕಿ ಬಳಸುತ್ತಿದ್ದ ಮೊಬೈಲ್ ಫೋನ್ ಸೋಮವಾರ ರಾತ್ರಿ ಸುಮಾರು 10.30 ಗಂಟೆಗೆ ಸ್ಫೋಟಗೊಂಡಿದೆ ಎಂದು PTI ಸುದ್ದಿ ಸಂಸ್ಥೆಗೆ ಪೊಲೀಸರು ತಿಳಿಸಿದ್ದಾರೆ. ಮನೆಯ ಸಮೀಪದಲ್ಲೇ ಇದ್ದ ಶಾಲೆಯೊಂದರಲ್ಲಿ ಆದಿತ್ಯಶ್ರೀ ಮೂರನೆ ತರಗತಿಯ ವಿದ್ಯಾರ್ಥಿನಿಯಾಗಿದ್ದಳು.
ಈ ಸಂಬಂಧ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದು, ತನಿಖೆ ಪ್ರಗತಿಯಲ್ಲಿದೆ.