×
Ad

ಪ್ರಧಾನಿ ಮೋದಿಯ 'ಮನ್‌ ಕಿ ಬಾತ್‌' ಕಾರ್ಯಕ್ರಮಕ್ಕೆ ಆಮಿರ್‌ ಖಾನ್‌ ಮೆಚ್ಚುಗೆ

Update: 2023-04-26 17:50 IST

ಹೊಸದಿಲ್ಲಿ: 'ಮನ್‌ ಕಿ ಬಾತ್‌' ಪ್ರಧಾನಿ ನರೇಂದ್ರ ಮೋದಿ ನಾಗರಿಕರ ಜೊತೆಗೆ ಸಂಪರ್ಕ ಸಾಧಿಸುವ ಒಂದು ಪ್ರಮುಖ ಸಂವಹನ ಮಾಧ್ಯಮವಾಗಿದೆ ಎಂದು 'ನ್ಯಾಷನಲ್‌ ಕಾಂಕ್ಲೇವ್‌ ಆನ್‌ ಮನ್‌ ಕಿ ಬಾತ್‌ @100'ಗೆ ಸಂದರ್ಭ ನಟ ಆಮಿರ್‌ ಖಾನ್‌ ಹೇಳಿದ್ದಾರೆ.

ಈ ಕಾರ್ಯಕ್ರಮವನ್ನು ಉಪರಾಷ್ಟ್ರಪತಿ ಜಗದೀಪ್‌ ಧನ್ಕರ್‌ ಉದ್ಘಾಟಿಸಿದರೆ ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವ ಅನುರಾಗ್‌ ಠಾಕುರ್‌ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.

ಮನ್‌ ಕಿ ಬಾತ್‌ ಇದರ 100ನೇ ಸಂಚಿಕೆ ಎಪ್ರಿಲ್‌ 30ರಂದು ಪ್ರಸಾರವಾಗಲಿದೆ.

“ದೇಶದ ನಾಯಕರೊಬ್ಬರು ಜನರೊಂದಿಗೆ ಸಂವಹನ ನಡೆಸಿ ಪ್ರಮುಖ ವಿಚಾರ ಚರ್ಚಿಸಿ ಹಾಗೂ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿ ಮತ್ತು ಸಲಹೆಗಳನ್ನು ನೀಡುವ ಕಾರ್ಯಕ್ರಮ ಇದಾಗಿದೆ, ಸಂವಹನದ ಮೂಲಕ ಹೀಗೆ ಮುನ್ನಡೆಸಬೇಕು,” ಎಂದು ಆಮಿರ್‌ ಹೇಳಿದರು.

“ನೀವು ಜನರಿಗೆ ನಿಮ್ಮ ಅನಿಸಿಕೆಗಳನ್ನು, ಭವಿಷ್ಯದ ಬಗ್ಗೆ ಯೋಚನೆಗಳನ್ನು ಹಾಗೂ ಅವುಗಳನ್ನು ಸಾಕಾರಗೊಳಿಸಲು ಜನರ ಸಹಕಾರ ಹೇಗೆ ಬೇಕೆಂಬುದನ್ನು ವಿವರಿಸುತ್ತೀರಿ. ಮನ್‌ ಕಿ ಬಾತ್‌ನಲ್ಲಿ ನಡೆಯುವ ಪ್ರಮುಖ ಸಂವಹನ ಇದಾಗಿದೆ,” ಎಂದು ಖಾನ್‌  ಸುದ್ದಿಗಾರರ ಜೊತೆ ಮಾತನಾಡುತ್ತಾ ಹೇಳಿದರಲ್ಲದೆ ಇದೊಂದು ಮಹತ್ವದ ಕಾರ್ಯಕ್ರಮವಾಗಿದೆ ಎಂದು ಹೇಳಿದರು.

Similar News